ADVERTISEMENT

ಸಮಸ್ಯೆ ಸುಳಿಯಲ್ಲಿ ಸಾತ್ಕೊಳಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2012, 8:45 IST
Last Updated 27 ಏಪ್ರಿಲ್ 2012, 8:45 IST
ಸಮಸ್ಯೆ ಸುಳಿಯಲ್ಲಿ ಸಾತ್ಕೊಳಿ
ಸಮಸ್ಯೆ ಸುಳಿಯಲ್ಲಿ ಸಾತ್ಕೊಳಿ   

ಸಾತ್ಕೊಳಿ (ನರಸಿಂಹರಾಜಪುರ): ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಮುತ್ತಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾತ್ಕೊಳಿ ಗ್ರಾಮದ ಸಮಸ್ಯೆಗಳಿಗೆ ಪರಿಹಾರಗಳೇ ದೊರಕಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಜನ ಸಂಖ್ಯೆ ಇದ್ದು, ಇಲ್ಲಿ ಸರ್ಕಾರಿ ಶಾಲೆ, ಸಮುದಾಯ ಭವನ ಸ್ತ್ರೀಶಕ್ತಿ ಸಂಘಗಳೂ ಇವೆ. ಗ್ರಾಮದ ಜನರು ಮೂಲತ: ಕೃಷಿ ಅವಲಂಬಿಸಿದ್ದಾರೆ. ಗ್ರಾಮದಲ್ಲಿ ಮೂಲಸೌಕರ್ಯದ ಕೊರೆತೂ ಇದೆ.

ಕಿರು ನೀರು ಸರಬರಾಜು ಯೋಜನೆಯ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಒಂದು ವೇಳೆ ವಿದ್ಯುತ್ ಕೈಕೊಟ್ಟರೆ ಒಂದೇ ಕೊಳವೆ ಬಾವಿ ಇದೆ. ಇದನ್ನು ಹೊರತು ಪಡಿಸಿ ಬೇರಾವುದೇ ಕುಡಿಯುವ ನೀರಿನ ಸೌಲಭ್ಯವಿಲ್ಲವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಈ ಗ್ರಾಮಕ್ಕೆ ವಿದ್ಯುತ್ ಸೌಲಭ್ಯ ವಿದ್ದರೂ ಬೀದಿ ದೀಪದ ಸೌಕರ್ಯವಿಲ್ಲ ದಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ.

40 ವರ್ಷಗಳಿಂದ ವಾಸವಾಗಿದ್ದರೂ ಕಾಯಂ ಹಕ್ಕು ಪತ್ರ ದೊರೆತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.ಗ್ರಾಮದಲ್ಲಿರುವ ಶಾಲೆಗೆ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಮಕ್ಕಳು ಗದ್ದೆಯಲ್ಲಿಯೇ ಶಾಲೆಗೆ ಹೋಗ ಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಅಭಿವೃದ್ಧಿ ಹೊಂದಿದ್ದರೂ ಬಡವಾಣೆಯ ರಸ್ತೆಗಳು ಮಣ್ಣಿನ ರಸ್ತೆಗಳಾಗಿಯೇ ಉಳಿದಿವೆ.

ಸಾತ್ಕೊಳಿ ಗ್ರಾಮ ಇದುವರೆಗೂ ಬಸ್ ಸೌಕರ್ಯ ಕಂಡಿಲ್ಲ. ಹಾಗಾಗಿ ಗ್ರಾಮಸ್ಥರು ಆಟೊ ರಿಕ್ಷಾಗಳನ್ನೇ ಅವಲಂಬಿಸಬೇಕಿದೆ.ಆಟೊ ಇಲ್ಲದೆ ಇದ್ದಾಗ 9 ಕಿಲೋ ಮೀಟರ್ ಮುತ್ತಿನ ಕೊಪ್ಪದವರೆಗೆ ನಡೆದು ಕೊಂಡು ಹೋಗಬೇಕಿದೆ. ಈ ಗ್ರಾಮ ವ್ಯಾಪ್ತಿಯಲ್ಲಿ ಹಲವು ಗುಡಿಸಲುಗಳಿವೆ. ಹಲವರಿಗೆ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾಗಿದೆ. ಆದರೂ ಕಾಮಗಾರಿ ಪ್ರಾರಂಭವಾಗಿಲ್ಲ.

ಬೀದಿ ದೀಪ ದುರಸ್ತಿಗೆ ಲೈನ್‌ಮೆನ್ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಗಮನ ಹರಿಸ ಲಾಗಿದೆ ಎನ್ನುತ್ತಾರೆ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಘವೇಂದ್ರ.ಸಾತ್ಕೊಳಿ ಗ್ರಾಮದ ಸಮಸ್ಯೆ ಬಗೆಹರಿಸುವತ್ತ ಜನಪ್ರತಿ ನಿಧಿಗಳು ಗಮನಹರಿಸಿ ಸಾರಿಗೆ ಸೌಲಭ್ಯ ಒದಗಿಸಬೇಕು. ಇದರಿಂದ ಅನುಕೂಲ ವಾಗುವುದು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.