ADVERTISEMENT

ಸಮಾಜ ನಿರ್ಮಾಣಕ್ಕೆ ಅವಶ್ಯಕ ನಿರ್ಣಯ ಕೈಗೊಳ್ಳಲಿ: ರಂಭಾಪುರಿಶ್ರೀ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 6:58 IST
Last Updated 25 ನವೆಂಬರ್ 2017, 6:58 IST

ಬಾಳೆಹೊನ್ನೂರು: ಉತ್ಕೃಷ್ಟ ಸಂಸ್ಕೃತಿ ಎತ್ತಿ ಹಿಡಿಯುವುದೇ ಎಲ್ಲ ಧರ್ಮಗಳ ಗುರಿಯಾಗಿದೆ. ವೈಚಾರಿಕತೆಯ ಹೆಸರಿ ನಲ್ಲಿ ಧರ್ಮ ಸಂಸ್ಕೃತಿಗೆ ಆತಂಕ ಗಳು ಎದುರಾ ಗುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ರಂಭಾ ಪುರಿ ಪೀಠದ ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿಯಲ್ಲಿ ನಡೆಯುತ್ತಿರುವ 12ನೇ ಧರ್ಮ ಸಂಸತ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಇಂತಹ ಸಂದಿಗ್ಧ ಕಾಲದಲ್ಲಿ ಧರ್ಮ ಪೀಠಾಚಾರ್ಯರು, ಸಂತರು, ಶರಣರು, ಸಜ್ಜನರು, ಸಮಾಜ ಚಿಂತಕರು, ರಾಜಕೀಯ ಧುರೀಣರು ಎಚ್ಚೆತ್ತು ಧರ್ಮ ಸಂಸ್ಕೃತಿ ಮೌಲ್ಯಗಳ ಸಂರಕ್ಷಣೆಗೆ ಶ್ರಮಿಸುವ ಅಗತ್ಯ ಇದೆ. ಹಿಂದೂಸ್ತಾನದಲ್ಲಿ ಇರುವವರೆಲ್ಲರೂ ಹಿಂದೂಗಳು ಎಂಬುದನ್ನು ಮರೆಯಬಾರದು. ಅವರವರ ಧರ್ಮ ಆಚರಣೆ ಬೇರೆ ಬೇರೆಯಾದರೂ ಸಮಷ್ಟಿ ಪ್ರಜ್ಞೆಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯಬೇಕಿದೆ’ ಎಂದಿದ್ದಾರೆ.

ಉಡುಪಿಯಲ್ಲಿ ನಡೆಯುತ್ತರುವ ಧರ್ಮ ಸಂಸತ್ತಿನಲ್ಲಿ ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಸಂಸತ್ತಿನಲ್ಲಿ ಭಾಗವಹಿಸಿರುವ ಆಚಾರ್ಯರು ಸಂತ ಶರಣರು ಆರೋಗ್ಯ ಪೂರ್ಣ ರಾಷ್ಟ್ರ ಮತ್ತು ಸಮಾಜ ನಿರ್ಮಾಣಕ್ಕೆ ಅವಶ್ಯಕ ನಿರ್ಣಯ ಕೈಗೊಳ್ಳಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.