ADVERTISEMENT

ಹಂಪಾಪುರದಲ್ಲಿ ಜೋಡಿ ಎತ್ತಿನ ಗಾಡಿ ಸ್ಪರ್ಧೆ

ಗಮನ ಸೆಳೆದ ರಾಜ್ಯಮಟ್ಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 7:12 IST
Last Updated 9 ಏಪ್ರಿಲ್ 2018, 7:12 IST
ಸ್ಪರ್ಧೆಯಲ್ಲಿ ಜೋಡಿ ಎತ್ತಿನ ಗಾಡಿ ಓಟದ ಪರಿ
ಸ್ಪರ್ಧೆಯಲ್ಲಿ ಜೋಡಿ ಎತ್ತಿನ ಗಾಡಿ ಓಟದ ಪರಿ   

ಚಿಕ್ಕಮಗಳೂರು: ತಾಲ್ಲೂಕಿನ ಹಂಪಾಪುರ ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದಿಂದ ಗ್ರಾಮದಲ್ಲಿ ಜೋಡಿ ಎತ್ತಿನ ಗಾಡಿ ಓಟ ರಾಜ್ಯ ಮಟ್ಟದ ಸ್ಪರ್ಧೆ ಭಾನುವಾರ ನಡೆಯಿತು.

ಗ್ರಾಮದ ಮುಖಂಡ ಮರಿಸಿದ್ದೇಗೌಡ, ಬೆಟ್ಟೇಗೌಡ, ಲಕ್ಕೇಗೌಡ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಎತ್ತಿನ ಗಾಡಿ ಸಾಗುವ ಮಾರ್ಗದ ಎರಡು ಬದಿಯಲ್ಲಿ ಮರದ ಮರದ ತುಂಡುಗಳಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಮಾರ್ಗದ ಬದಿಯಲ್ಲಿ, ಸುತ್ತಲಿನ ಕಟ್ಟಡದ ಮೇಲೆ ನಿಂತು ಜನರು ಎತ್ತಿನ ಗಾಡಿ ಓಟ ವೀಕ್ಷಿಸಿದರು..

‘ವಿರೂಪಾಕ್ಷೇಶ್ವರ ದೇವರ ಪೂಜೆಯಿಂದ ಗ್ರಾಮದಲ್ಲಿನ ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಉತ್ತಮ ಪೈರು ಬಂದಿದೆ. ಜಾತ್ರೆಯನ್ನು ರೈತರು ಸುಗ್ಗಿಯಂತೆ ಆಚರಿಸಿ ಸಂತೋಷ ಪಡುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಎಚ್.ಪಿ.ಮಂಜೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.