ADVERTISEMENT

‘ನಾಯಕತ್ವ ಗುಣ ಬೆಳೆಸಲು ಶಿಬಿರ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 19 ಮೇ 2014, 5:16 IST
Last Updated 19 ಮೇ 2014, 5:16 IST
ನರಸಿಂಹರಾಜಪುರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮುಕ್ತಾಯಗೊಂಡ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಂದ್ರಶೇಖರಯ್ಯ, ಸತ್ಯನಾರಾಯಣರಾವ್, ಬಂಗಾರಿ ಹೆಗ್ಡೆ, ಕಾವ್ಯಶ್ರೀ, ಸಂಪನ್ಮೂಲ ವ್ಯಕ್ತಿಗಳಾದ ರವೀಶ್, ನಾಗರಾಜ್ ಇದ್ದರು.
ನರಸಿಂಹರಾಜಪುರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಮುಕ್ತಾಯಗೊಂಡ ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳೊಂದಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಂದ್ರಶೇಖರಯ್ಯ, ಸತ್ಯನಾರಾಯಣರಾವ್, ಬಂಗಾರಿ ಹೆಗ್ಡೆ, ಕಾವ್ಯಶ್ರೀ, ಸಂಪನ್ಮೂಲ ವ್ಯಕ್ತಿಗಳಾದ ರವೀಶ್, ನಾಗರಾಜ್ ಇದ್ದರು.   

ನರಸಿಂಹರಾಜಪುರ: ಬೇಸಿಗೆ ಶಿಬಿರದಲ್ಲಿ ಹೇಳಿ ಕೊಡುವ ವಿಷಯಗಳಿಂದ ಮಕ್ಕ ಳಲ್ಲಿ ನಾಯಕತ್ವ ಗುಣ ಬೆಳೆಸಲು ಹಾಗೂ ಆತ್ಮ ವಿಶ್ವಾಸ ಹೆಚ್ಚಿಸಲು ಸಹ ಕಾರಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಚಂದ್ರಶೇಖರಯ್ಯ ತಿಳಿಸಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ 10 ದಿನ ಗಳಿಂದ ನಡೆದ  ಶನಿವಾರ ಮುಕ್ತಾ ಯಗೊಂಡ ಬೇಸಿಗೆ ಶಿಬಿರದ  ಸಮಾ ರಂಭದಲ್ಲಿ ಅವರು ಮಾತನಾಡಿದರು.

ಬೇಸಿಗೆ ರಜೆಯ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲಿದ್ದು ಅನಗತ್ಯವಾಗಿ ಕಾಲ ಹರಣ ಮಾಡುತ್ತಾರೆ. ಹಾಗಾಗಿ ಹತ್ತು ದಿನಗಳ ಕಾಲ ಜೀವನ ಕೌಶಲ್ಯಕ್ಕೆ ಸಹಾಯಕವಾಗುವ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ. ಕರಾಟೆ ಕಲಿಸಿ ರುವುದು ಆತ್ಮರಕ್ಷಣೆಗೆ ಸಹಕಾರಿ ಯಾಗುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ದೌರ್ಜನ್ಯ, ಕಿರುಕುಳ ಎದುರಿ ಸುವ ಸಂದರ್ಭದಲ್ಲಿ ಇದು ಅವಶ್ಯಕ ವಾಗುತ್ತದೆ.

ಬೇಸಿಗೆ ಶಿಬಿರದಲ್ಲಿ 5 ರಿಂದ 16 ವರ್ಷದ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಆದರೆ ಅತಿ ಸಣ್ಣ ವಯಸ್ಸಿನ ಮಕ್ಕಳಿಗೆ ಯೋಗ, ಕರಾಟೆ ಕಲಿಸುವುದು ಕಷ್ಟದಾಯಕ ವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳು ಅಭಿ ಪ್ರಾಯ ಪಟ್ಟಿರುವುದರಿಂದ ವಯಸ್ಸಿನ ಮಿತಿ ಹೆಚ್ಚಿಸುವಂತೆ ಬಾಲಭವನ ಸೊಸೈ ಟಿಗೆ ಮನವಿ ಸಲ್ಲಿಸಲಾಗುವುದು. ಮಕ್ಕಳು ಶಿಬಿರದಲ್ಲಿ ಕಲಿತ ವಿಚಾರ ಗಳನ್ನು ಮುಂದುವರೆಸಿ ಕೊಂಡು ಪರಿ ಣಿತಿ ಹೊಂದಲು ಪ್ರಯತ್ನಿಸ ಬೇಕೆಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಯೋಗ ಶಿಕ್ಷಕ ರವೀಶ್ ಮಾತನಾಡಿ ಹತ್ತು ದಿನಗಳ ಕಾಲ ಮಕ್ಕಳು ಯೋಗವನ್ನು ಆಸಕ್ತಿ ಯಿಂದ ಕಲಿತಿರುವುದು ಸಂತಸ ತಂದಿದೆ. ಸಣ್ಣ ಮಕ್ಕಳಿಗೆ ಅವರ ವಯಸ್ಸಿಗೆ ಅನು ಗುಣವಾಗಿ ಯೋಗ ಹೇಳಿ ಕೊಡ ಲಾಗಿದೆ. ಕಲಿಕೆ ಎನ್ನುವುದು ನಿರಂತ ರಾವಾಗಿದ್ದು ಶಿಕ್ಷರಿಂದ ಮಕ್ಕಳು, ಮಕ್ಕ ಳಿಂದ ಶಿಕ್ಷಕರು ಕಲಿ ಯುವು ದಿರುತ್ತದೆ. ಶಾಲೆಗಳಲ್ಲಿ ಪಠ್ಯದ ವಿಷಯಕ್ಕೆ ಆಧ್ಯತೆ ನೀಡುವುದರಿಂದ ಇತರ ವಿಷಯಗಳಿಗೆ ಹೆಚ್ಚಿನ ಸಮಯಾವಕಾಶವಿರುವುದಿಲ್ಲ.

ಮಕ್ಕಳು ತಾವು ಕಲಿತ ವಿಚಾರಗಳನ್ನು ಇನ್ನೊಬ್ಬರಿಗೆ ಕಲಿಸುವ ಪ್ರಯತ್ನ ಮಾಡ ಬೇಕು ಎಂದರು. ಸಂಪನ್ಮೂಲ ವ್ಯಕ್ತಿ  ಶಿಕ್ಷಕ ನಾಗರಾಜ್, ಕರಾಟೆ ಶಿಕ್ಷಕ ಪ್ರದೀಪ್, ಸತ್ಯ ನಾರಾಯಣರಾವ್, ಮೇಲ್ವಿಚಾರಕಿ ಬಂಗಾರಿಹೆಗ್ಡೆ, ಕಾವ್ಯಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.