ADVERTISEMENT

‘ಪರಂಪರೆ ಸುಧಾರಣೆಗೆ ಸಂಘಟನೆಗಳು ಮುಂದಾಗಲಿ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 8:33 IST
Last Updated 20 ಡಿಸೆಂಬರ್ 2013, 8:33 IST

ಕಡೂರು: ದೇಶದ ಪ್ರಾಚೀನ ಇತಿಹಾಸ ಮತ್ತು ಪರಂಪರೆ ನಿತ್ಯ ಅಧಃಪತನದತ್ತ ಸಾಗುತ್ತಿದ್ದು, ಇದರ ಸುಧಾರಣೆಗೆ ಸಂಘಟನೆಗಳು ಮುಂದಾಗಬೇಕು ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ತಾಲ್ಲೂಕಿನ ಜಿ.ತಿಮ್ಮಾಪುರದಲ್ಲಿ ಬುಧವಾರ ತರಳಬಾಳು ಮಹಿಳಾ ಸಂಘಟನೆ ಜಿಲ್ಲಾ ಪಂಚಾಯಿತಿ ಮತ್ತು ಸ್ವ–ಸಹಾಯದಿಂದ ಸ್ಥಾಪಿಸಿದ ‘ತರಳಬಾಳು ಶುದ್ಧಗಂಗಾ’ ಕುಡಿ ಯುವ ನೀರಿನ ಘಟಕ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಂದಿನ ಯುಗದಲ್ಲಿ ಸಂಘ–ಸಂಸ್ಥೆಗಳ ಚಟುವಟಿಕೆಗಳು ಭಾಷಣ, ಮಾತು ಗಾರಿಕೆಗೆ ಸೀಮಿತವಾಗುತ್ತಿದ್ದು, ಅರ್ಥ ಪೂರ್ಣ ಬದುಕಿಗೆ ಮೌನ ಅರ್ಥಾತ್‌ ಅಗತ್ಯವಿದ್ದಾಗ ಮಾತ್ರ ಮಾತನಾಡು ವುದು ಸಾಕು. ಪುರುಷ ಸಂಘಟನೆಗಳಿ ಗಿಂತ ಮಹಿಳಾ ಸಂಘಟನೆಗಳು ಜನಪರ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ. ಇಂತಹ ಚಟುವಟಿಕೆ ಗಳಿಗೆ ಪ್ರೋತ್ಸಾಹ ಅಗತ್ಯ ಎಂದರು.

  ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಕಡೂರು ತಾಲ್ಲೂಕಿನಲ್ಲಿ ಬರದ ಛಾಯೆ ಇರುವುದನ್ನು ಅರಿತು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಹೆಬ್ಬೆ ಯೋಜನೆ ಮತ್ತು ಭದ್ರಾ ಕುಡಿಯುವ ನೀರು ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಮೂಲಕ ಕಿಂಚಿತ್‌ ಉಪಯೋಗವಾಗಲಿದ್ದು ನಾನಾ ಕಾರಣಗಳಿಂದ ಯೋಜನೆಗಳು ಕುಂಟುತ್ತಾ ಸಾಗಿವೆ. ಮುಖ್ಯಮಂತ್ರಿ ಗಳು ಬರಪೀಡಿತ ತಾಲ್ಲೂಕಿನ ಸಂಕಷ್ಟ ನಿವಾರಣೆಗೆ  ಶಾಸಕರ, ಅಧಿಕಾರಿಗಳ, ಜನಪ್ರತಿನಿಧಿಗಳ ಸಭೆ ಕರೆದು ಯೋಜನೆಯ ಗತಿಗೆ ವೇಗ ನೀಡಬೇಕಿದೆ ಎಂದರು.

ಸಿರಿಗೆರೆ ಶ್ರೀಗಳು 2–3 ನೀರಾವರಿ ಯೋಜನೆಗಳ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿ ಪೂರ್ಣಗೊಳಿಸಿದ್ದು ಕಡೂರು ತಾಲ್ಲೂಕಿನ ನೀರಾವರಿ ಯೋಜನೆಗಳ ಜಾರಿ ಕುರಿತು ಮಾರ್ಗ ದರ್ಶನ ನೀಡಬೇಕಿದೆ ಎಂದು ಮನವಿ ಮಾಡಿ, ಜಿ.ತಿಮ್ಮಾಪುರದಲ್ಲಿ ತರಳ ಬಾಳು ಮಹಿಳಾ ಘಟಕ ಸ್ಥಾಪಿಸಿರುವ ಶುದ್ಧಗಂಗಾ ಘಟಕದ ಫಿಲ್ಟರ್‌ (ಶುದ್ಧೀಕರಣ ಘಟಕ) ಬದಲಾವಣೆ ಗಳಿಗೆ ಎರಡು ವರ್ಷಗಳ ಅವಧಿಗೆ ಸ್ವಂತ ಖರ್ಚಿನಲ್ಲಿ ನಿರ್ವಹಣೆ ಮಾಡುವುದಾಗಿ ತಿಳಿಸಿದರು.

ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ ದರು. ಮಾಜಿ ಶಾಸಕ ಡಾ.ವೈ.ಸಿ. ವಿಶ್ವನಾಥ್‌, ಜಿ.ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಜಿ.ಪಂ ಸದಸ್ಯೆ ಕವಿತಾ ಬೆಳ್ಳಿಪ್ರಕಾಶ್‌, ಸಾಹಿತಿ ಚಟ್ನಳ್ಳಿ ಮಹೇಶ್‌ ಮಾತನಾಡಿದರು. ಜಿ.ಪಂ ಸದಸ್ಯರಾದ ಎಚ್‌.ಸಿ,ಕಲ್ಮರುಡಪ್ಪ,  ಮಾಲಿನಿಬಾಯಿ ರಾಜಾನಾಯ್ಕ, ಶಶಿರೇಖಾ ಸುರೇಶ್‌, ತರಳಬಾಳು ಮಹಿಳಾ ವೇದಿಕೆಯ ಅಧ್ಯಕ್ಷೆ ಚನ್ನಮ್ಮ ರಂಗಪ್ಪ, ಗಂಗಾಧರ, ಮಾರ್ಗದ ಮಲ್ಲಿಕಾರ್ಜುನಪ್ಪ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.