ADVERTISEMENT

‘ವಿದ್ಯಾರ್ಥಿಗಳು ಸೌಲಭ್ಯ ತಲುಪಿಸುವ ಕೆಲಸ ಮಾಡಲಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 7:49 IST
Last Updated 23 ಡಿಸೆಂಬರ್ 2013, 7:49 IST

ಮುತ್ತಿನಕೊಪ್ಪ(ಎನ್.ಆರ್.ಪುರ): ಸಮಾಜ ಕಾರ್ಯ ವಿದ್ಯಾರ್ಥಿಗಳು ಸಮಾಜ ಸೇವೆಗಿಂತಲೂ ಸರ್ಕಾರದ ಸೌಲಭ್ಯಗಳನ್ನು  ಸಮಾಜದ ಕೆಳ ವರ್ಗದ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜನರ ನಡುವೆ ಸೇತುವೆ ಯಾಗಿ ಕಾರ್ಯನಿರ್ವಹಿಸ ಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಪೂರ್ಣೇಶ್ ತಿಳಿಸಿದರು.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ದಲ್ಲಿ ಭಾನುವಾರ ಮುಕ್ತಾಯಗೊಂಡ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಾಜ್ಯ ಮಟ್ಟದ ಪ್ರಥಮ ಶಿಬಿರದಲ್ಲಿ ಸಮಾ ರೋಪ ಭಾಷಣ ಮಾಡಿದರು.

ಶಿಬಿರ ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ, ಜ್ಞಾನವನ್ನು, ಸಂಸ್ಕೃತಿ, ಕಲೆ, ಅಧ್ಯಯನ ವಿಷಯಗಳನ್ನು ಹಂಚಿ ಕೊಳ್ಳಲು ಸಹಾಯಕವಾಗಿದೆ. ಶಿಬಿರದಲ್ಲಿ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ಜೀವನಕ್ಕೆ ಮಾದರಿ ಯಾಗಿಟ್ಟು ಕೊಳ್ಳಬೇಕು.  ಶಿಕ್ಷಣ ಯಾರು ಕಿತ್ತುಕೊಳ್ಳಲಾಗದ ಉತ್ತಮವಾದ ಆಸ್ತಿಯಾಗಿದೆ. ವಿದ್ಯಾವಂತರಿಂದ ಸರ್ಕಾರ, ಸಮಾಜ ಸಾಕಷ್ಟು ಬಯಸುತ್ತಿದೆ. ಸಮಾಜದ ವಿವಿಧ ಸಮಸ್ಯೆಗಳನ್ನು ಅಧ್ಯಯನ ಮಾಡಿ  ಅದಕ್ಕೆ ಪರಿಹಾರ ವನ್ನು ಕಂಡು ಹಿಡಿದು ಸಮಾಜದ ಋಣವನ್ನು ತೀರಿಸುವ ಪ್ರಜೆಯಾಗಿ ರೂಪುಗೊಳ್ಳಬೇಕೆಂದು ಹೇಳಿದರು.

ನಿವೃತ್ತ ಸೈನಿಕ ಬಿ.ಟಿ.ಯತಿರಾಜ್ ಮಾತನಾಡಿ ರಾಜ್ಯಮಟ್ಟದ ಶಿಬಿರಕ್ಕೆ ಸರ್ಕಾರ ದಿಂದ ಯಾವುದೇ ಹಣಕಾಸಿನ ನೆರವು ದೊರೆಯದಿದ್ದರೂ ಸಹ ಗ್ರಾಮಸ್ಥರ ಸಂಪೂರ್ಣ ಸಹಕಾರ ದಿಂದ ಶಿಬಿರ ಯಶ್ವಸಿಯಾಗಿ ನಡೆಯಲು ಸಾಧ್ಯವಾಯಿತು ಎಂದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಮಾತನಾಡಿ ಸಮಾಜ ಕಾರ್ಯ ಶಿಬಿರದಲ್ಲಿ ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸುವ ಪ್ರಯೋಗಶೀಲ ಕ್ರಮದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿ ಸಲಾಗಿದೆ. ತರಗತಿಯ ಒಳಗೆ ಪಡೆ ಯುವ ಶಿಕ್ಷಣ ಕೇವಲ ಜ್ಞಾನವಾಗಿದೆ. ತರಗತಿಯ ಹೊರಗಡೆಯ ಶಿಕ್ಷಣ ಜೀವಮಾನದಲ್ಲಿ ಮರೆಯಲು ಸಾಧ್ಯ ವಾಗದ ಜೀವ ಕೇಂದ್ರಿತ, ಮೌಲ್ಯಯುತ  ಜೀವನ ಅನುಭವನ್ನು ಕೊಡುವಂ ತದ್ದಾಗಿದೆ ಎಂದು ತಿಳಿಸಿದರು.

ಪಿಸಿಎಆರ್ ಡಿ ಬ್ಯಾಂಕ್ ಅಧ್ಯಕ್ಷ ಕೆ.ಪಿ.ಸಂಪತ್ ಕುಮಾರ್, ಮುತ್ತಿನ ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ  ಎಸ್.ಗೋಪಾಲ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತ ವಹಿಸಿ ಮಾತನಾ ಡಿದರು.

ಗ್ರಾ.ಪಂ ಸದಸ್ಯೆ ನೆಹರಬಾನು, ಶಾಲಾ ಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ವೆಂಕಟೇಶ್ ಶಾಲಾ ಮುಖ್ಯ ಶಿಕ್ಷಕಿ ರಾಧ, ಉಪನ್ಯಾಸಕ  ಕೆ.ಪಿ. ಸುಜಿತ್ , ವಿದ್ಯಾರ್ಥಿಗಳಾದ ಎಂ.ಅರುಣ್, ಶಿಲ್ಪ, ಲೋಕೇಶ್ ಇದ್ದರು.

ವಿವಿಧ ಕಾಲೇಜಿನ  ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಭಾಗವಹಿಸಿದ ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.