ADVERTISEMENT

‘ಸಂಘಟನೆಯಿಂದ ಸಾಮಾಜಿಕ ನ್ಯಾಯ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 5:20 IST
Last Updated 21 ಡಿಸೆಂಬರ್ 2013, 5:20 IST

ಬಾಳೆಹೊನ್ನೂರು: ಸಂಘಟನೆಯಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ ಎಂದು ಸಹಕಾರಿ ಸಂಘಗಳ ನಿವೃತ್ತ ಉಪ ನಿಬಂಧಕ ಚಂದ್ರಶೇಖರ ಸುವರ್ಣ ತಿಳಿಸಿದರು.

ಇಲ್ಲಿನ ಕಡ್ಲೆಮಕ್ಕಿಯಲ್ಲಿರುವ ನಾರಾ ಯಣಗುರು ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅರ್ಧವಾರ್ಷಿಕ ಪ್ರಾದೇಶಿಕ ಮಹಾ ಸಭೆಯಲ್ಲಿ ‘ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಮತ್ತು ಸಂಘಟನೆ’ ವಿಷಯ ಕುರಿತು ಉಪನ್ಯಾಸ ನೀಡಿದರು. 1993ರ ವೇಳೆಗೆ ರಾಜ್ಯದ ಹಲವೆಡೆ  ಸ್ವಯಂ ಪ್ರೇರಿತರಾಗಿ ಬಿಲ್ಲವ ಚಿಂತನ ಸಭೆಗಳು ನಡೆದವು. ಬಿಲ್ಲವ ಸಮಾಜ ಬಾಂಧವರನ್ನು ಒಂದಡೆ ಸೇರಿಸುವುದು ಅದರ ಮುಖ್ಯ ಉದ್ದೇಶ ವಾಗಿತ್ತು. ಇಂದು ಮಹಾಮಂಡಲದ ಅಡಿಯಲ್ಲಿ ಸುಮಾರು 259 ಸಂಘಟನೆ ಗಳಿವೆ. ಸಂಘಟನೆಯಲ್ಲಿ ಎಲ್ಲಾ ಜನರೂ ಸಕ್ರಿ ಯವಾಗಿ ಭಾಗವಹಿಸಲು ಅನುಕೂ ಲವಾಗುವಂತೆ ಬೈಲಾ ರಚಿಸಲಾಗಿದೆ ಎಂದರು.

ನರಸಿಂಹರಾಜಪುರದ ಆರ್. ಸದಾಶಿವ ಮಾತನಾಡಿ, ಬಿಲ್ಲವರು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಸಂಖೆಯಲ್ಲಿದ್ದರೂ ಸೂಕ್ತ ಪ್ರಾತಿನಿದ್ಯ ಸಿಗುತ್ತಿಲ್ಲ. ಹಲವು ಕಡೆಗಳಲ್ಲಿ ಸಂಘ ಒಡೆಯುವ ಪ್ರಯತ್ನ ನಡೆಯುತ್ತಿದೆ. ಸಾಕಷ್ಟು ಒತ್ತಡಗಳ ನಡುವೆ ನಾವುಗಳು ಪ್ರಜ್ಞಾವಂತರಾಗಬೇಕಿದೆ. ಬಿಲ್ಲವ ಮುಖಂಡರ ಬೆಳವಣಿಗೆಗೆ ಎಲ್ಲರೂ ಸಹಕರಿಸುವಂತೆ ಅವರು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಯರಾಮ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ.ಸಿ. ಸುವರ್ಣ, ಕೆ.ಜಿನ್ನಪ್ಪ ಪೂಜಾರಿ  ಅವರನ್ನು ಸನ್ಮಾನಿಸಲಾಯಿತು. ಬಿಲ್ಲವ ಸಮುದಾಯದ 98 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್‌ ವೆನಿಲ್ಲಾ, ವಿ.ಜಿ.ನಾರಾಯಣ, ಸತೀಶ್ ಅರಳಿಕೊಪ್ಪ, ದಯಾಕರ ಸುವರ್ಣ, ಎಚ್.ಎಂ.ಸತೀಶ್, ಪ್ರಶಾಂತ್‌ ಕುಮಾರ್, ರಾಮ.ಡಿ.ಸಾಲ್ಯಾನ, ಮೋಹನ್‌ದಾಸ್ ಪಾವೂರು, ದೇವ ದಾಸ್ ಕಟ್ಟೆಮಾರ್, ಪ್ರಭಾಕರ ಬಂಗೇರ, ಸುದರ್ಶನ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.