ADVERTISEMENT

ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ 103 ವರ್ಷದ ವೃದ್ಧೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 5:07 IST
Last Updated 28 ಫೆಬ್ರುವರಿ 2025, 5:07 IST
ಪಾದಯಾತ್ರೆ ತೆರಳಿದ ಪಾರ್ವತಮ್ಮ
ಪಾದಯಾತ್ರೆ ತೆರಳಿದ ಪಾರ್ವತಮ್ಮ   

ಚಿಕ್ಕಮಗಳೂರು: 103 ವರ್ಷದ ವೃದ್ಧೆಯೊಬ್ಬರು ಧರ್ಮಸ್ಥಳಕ್ಕೆ ಪಾದಯಾತ್ರೆ ಮಾಡಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತುಮಕೂರು ಜಿಲ್ಲೆಯ ತಿಪಟೂರಿನ ಪಾರ್ವತಮ್ಮ ಅವರು ಸೋಮವಾರ ರಾತ್ರಿ ಮೂಡಿಗೆರೆ ತಾಲ್ಲೂಕಿನ ಬಣಕಲ್ ಬಳಿ ರಸ್ತೆಯಲ್ಲಿ ಪಾದಯಾತ್ರೆ ತೆರಳುತ್ತಿದ್ದಾಗ ಸ್ಥಳೀಯರು ಮೊಬೈಲ್‌ ಫೋನ್‌ನಲ್ಲಿ ವಿಡಿಯೊ ಚಿತ್ರೀಕರಿಸಿಕೊಂಡಿದ್ದಾರೆ.

‘ದೇಶದ ಸೈನಿಕರಿಗೆ ಒಳ್ಳೆಯದಾಗಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಡಿರುವ ಕಾನೂನು ಎಲ್ಲಾ ರಾಜ್ಯಗಳಲ್ಲೂ ಜಾರಿಯಾಗಬೇಕು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶಕ್ಕೆ ಒಳ್ಳೆಯದಾಗುತ್ತಿದೆ. ಇನ್ನೂ ಒಳ್ಳೆಯದಾಗಬೇಕು. ಅದಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇನೆ’ ಎಂದು ಪಾರ್ವತಮ್ಮ ಹೇಳಿದ್ದು ವಿಡಿಯೊದಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.