ನರಸಿಂಹರಾಜಪುರ: ತಾಲ್ಲೂಕಿನ ಕಬ್ಬಿಣ ಸೇತುವೆ ಸಮೀಪದ ಅರಳಿಕೊಪ್ಪ ಶಿವಪ್ರಸಾದ್ ಎಂಬುವರ ರಬ್ಬರ್ ತೋಟದಲ್ಲಿದ್ದ 13 ಅಡಿ ಉದ್ದದ ಗಂಡು ಕಾಳಿಂಗ ಸರ್ಪವನ್ನು ಉರುಗ ತಜ್ಞ ಬಿ.ಜಿ.ಹರೀಂದ್ರ ಸೆರೆಹಿಡಿದರು.
ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಸೆರೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟರು. ಇದುವರೆಗೆ ಉರುಗ ತಜ್ಞ ಬಿ.ಜಿ.ಹರೀಂದ್ರ ಅವರು 300 ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.