ADVERTISEMENT

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತ್ತೆ ನಾಲ್ವರಿಗೆ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:27 IST
Last Updated 26 ಜೂನ್ 2020, 16:27 IST
ಕೊರೊನಾ ವೈರಸ್
ಕೊರೊನಾ ವೈರಸ್   

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಶುಕ್ರವಾರ ನಾಲ್ವರಿಗೆ ಕೋವಿಡ್‌–19 ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24ಕ್ಕೆ ಏರಿದೆ.

ಬೆಂಗಳೂರಿನಿಂದ ತರೀಕೆರೆ ತಾಲ್ಲೂಕಿಗೆ ಬಂದಿದ್ದ 43 ವರ್ಷದ ಪುರುಷಗೆ (ಪಿ–10622), ಮುಂಬೈನಿಂದ ಶೃಂಗೇರಿ ತಾಲ್ಲೂಕಿಗೆ ಬಂದು ಸಚ್ಚಿದಾನಂದಪುರದ ಕ್ವಾರಂಟೈನ್‌ ಕೇಂದ್ರದಲ್ಲಿದ್ದ 51 ವರ್ಷದ ಪುರುಷಗೆ (ಪಿ–10623), 20 ವರ್ಷದ ಯುವತಿಯರಿಬ್ಬರಿಗೆ (ಪಿ–10624, ‍ಪಿ–10625) ಸೋಂಕು ಪತ್ತೆಯಾಗಿದೆ. ನಾಲ್ವರನ್ನು ಚಿಕ್ಕಮಗಳೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ತರೀಕೆರೆ ತಾಲ್ಲೂಕಿಗೆ ಬಂದಿದ್ದ 43 ವರ್ಷದ ಪುರುಷನ ಪ್ರಾಥಮಿಕ ಸಂಪರ್ಕದ್ದಲಿದ್ದವರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ADVERTISEMENT

393ಮಾದರಿ ಪರೀಕ್ಷೆಗೆ ರವಾನೆ

ಕೊರೊನಾ ವೈರಾಣು ಸೋಂಕು ಪತ್ತೆ ನಿಟ್ಟಿನಲ್ಲಿ 393 ಮಂದಿಯ ಗಂಟಲಿನ ದ್ರವ ಮತ್ತು ಮೂಗಿನ ದ್ರವ ಮಾದರಿಯನ್ನು ಶುಕ್ರವಾರ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

9 ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ದೃಢಪಟ್ಟಿಲ್ಲ. 623ಮಂದಿಯ ವರದಿ ಬರಬೇಕಿದೆ. 393ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ಚಿಕ್ಕಮಗಳೂರು ಕೊವಿಡ್‌–19 ಪ್ರಕರಣ ಅಂಕಿಅಂಶ

ಆರೋಗ್ಯ ತಪಾಸಣೆ: 393

ಹೋಂ ಕ್ವಾರಂಟೈನ್‌ ಇರುವವರು: 239

ಗುಣಮುಖ ಆದವರು: 21

ಮೃತಪಟ್ಟವರು: 01

ಹೋಂ ಕ್ವಾರಂಟೈನ್‌ ಪೂರ್ಣ:202

ಪರೀಕ್ಷೆಗೆ ಕಳಿಸಿದ ಮಾದರಿ: 5,988

ವರದಿ ಪಾಸಿಟಿವ್‌: 46

ವರದಿ ನೆಗೆಟಿವ್‌: 5,365

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.