ತರೀಕೆರೆ: ತಾಲ್ಲೂಕಿನ ಯಾತ್ರಾ ಸ್ಥಳ ಕಲ್ಲತ್ತಿಗಿರಿಯ ಕಟ್ಟಿನ ಚೌಡೇಶ್ವರಿ ದೇವಿಯ ಅರ್ಚಕ ಈಶಣ್ಣ ಅವರಿಗೆ ಸೇರಿದ ಆಮ್ನಿ ವಾಹನದ ಮೇಲೆ ಮರ ಬಿದ್ದು ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ವಾಹನದಲ್ಲಿದ್ದ ಚಾಲಕ ಮಹಾಂತೇಶ್ ಅವರು ಸಣ್ಣ ಪುಟ್ಟ ಗಾಯಗೊಂಡಿದ್ದು, ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ವಾಹನದಲ್ಲೇ ಕುಳಿತಿದ್ದ, ಅರ್ಚಕ ಈಶಣ್ಣ ಅವರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದು, ಲಿಂಗದಹಳ್ಳಿ ಪೊಲೀಸ್ ಠಾಣಾಧಿಕಾರಿಗಳು ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.