ADVERTISEMENT

ತರೀಕೆರೆ | ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 13:31 IST
Last Updated 5 ಮೇ 2025, 13:31 IST
ಸಂತವೇರಿ ಗ್ರಾಮದ ಅಬ್ದುಲ್ ಸುಬಾನ್ ಎಂಬುವರಿಗೆ ಸೇರಿದ ಕಾಫಿ ತೋಟ ಆಕಸ್ಮಿಕ ಬೆಂಕಿಯಿಂದ ಹಾನಿಯಾಗಿದೆ
ಸಂತವೇರಿ ಗ್ರಾಮದ ಅಬ್ದುಲ್ ಸುಬಾನ್ ಎಂಬುವರಿಗೆ ಸೇರಿದ ಕಾಫಿ ತೋಟ ಆಕಸ್ಮಿಕ ಬೆಂಕಿಯಿಂದ ಹಾನಿಯಾಗಿದೆ   

ತರೀಕೆರೆ: ತಾಲ್ಲೂಕಿನ ಸಂತವೇರಿ ಗ್ರಾಮದ ಅಬ್ದುಲ್ ಸುಬಾನ್ ಬಿನ್ ಅಬ್ದುಲ್ ಮಜೀದ್ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ.

ಅಂದಾಜು 1.20 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಬೆಳೆದಿದ್ದ ಕಾಫಿ, ಕಾಳು ಮೆಣಸು, ಸಿಲ್ವರ್ ಮರಗಳು ಬೆಂಕಿಗೆ ಆಹುತಿಯಾಗಿದೆ.

ರಾತ್ರಿ ವೇಳೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ. ತೋಟದಲ್ಲಿ ಒಣಗಿದ ತರಗೆಲೆಗಳು ಇದ್ದಿದ್ದರಿಂದ ಬೆಂಕಿಯು ಕ್ಷಿಪ್ರಗತಿಯಲ್ಲಿ ವ್ಯಾಪಿಸಿಸಿದೆ.

ADVERTISEMENT

ಸುಮಾರು ₹20 ಲಕ್ಷದಷ್ಟು ನಷ್ಟವಾಗಿದೆ ಎಂದು ಅಬ್ದುಲ್ ಮಜೀದ್ ಲಿಂಗದಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.