ಸಾಂದರ್ಭಿಕ ಚಿತ್ರ
ಚಿತ್ರಕೃಪೆ: @Amboselinp
ಬಾಳೆಹೊನ್ನೂರು: ಆನೆಗಳು ಸುತ್ತಾಡುವ ಜಾಗದಲ್ಲಿ ಎಐ ಆಧಾರಿತ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕ್ಷಣ ಕ್ಷಣದ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಿದೆ. ಅದನ್ನು ಗ್ರಾಮಸ್ಥರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕೊಪ್ಪ ಡಿಎಫ್ಒ ಶಿವಶಂಕರ್ ತಿಳಿಸಿದರು.
ಆನೆಗಳನ್ನು ಹಿಮ್ಮೆಟ್ಟಿಸಲು ಬಾಳೆಹೊನ್ನೂರಿನಲ್ಲಿ 8 ಜನ ಸಿಬ್ಬಂದಿ ವಾಹನ ಸಹಿತ ಎಲಿಫೆಂಟ್ ಟಾಸ್ಕ್ ಪೋರ್ಸ (ಇಟಿಎಫ್) ರಚಿಸಲಾಗಿದೆ. ಹಿಂದೆ ಸಕಲೇಶಪುರ, ಹಾಸನ ಭಾಗದಿಂದ ಆನೆಗಳು ಮಲೆನಾಡಿಗೆ ಬರುತ್ತಿದ್ದವು. ಆದರೆ ಈಗ ಭದ್ರಾ ವನ್ಯಜೀವಿ ಕಡೆಯಿಂದ ಬರುತ್ತಿವೆ. ನರಸಿಂಹರಾಜಪುರ ಬಳಿ ಕಂಡು ಬಂದ 16 ಆನೆಗಳ ತಂಡ ವಾಪಸ್ಸು ಹೋಗಿದೆ. ಭದ್ರಾ ವನ್ಯಜೀವಿ ವಲಯದ ಬಳಿ ಟಿಂಟಿಕಲ್ ಲೈನ್ ಅಳವಡಿಸಲಾಗುವುದು. ಪ್ರಸ್ತುತ 7 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೇ ಬ್ಯಾರೀಕೆಡ್ ಅಳವಡಿಸಲು ಡಿಪಿಆರ್ ನಡೆಸಿದ್ದು ₹10 ಕೋಟಿ ಖರ್ಚಾಗಲಿದೆ. ಇದಕ್ಕೆ ಸಚಿವ ಸಂಪುಟದ ಅನುಮತಿ ಅಗತ್ಯ ಎಂದು ತಿಳಿಸಿದರು.
ಹಾವೇರಿಯಲ್ಲಿದ್ದ ಕುಟುಂಬಸ್ತರು ಚಿಕ್ಕಮಗಳೂರಿಗೆ ಬಂದು ಮೃತದೇಹ ಪಡೆಯಲು ಕಷ್ಟವಾಗಲಿದೆ ಎಂದು ತಿಳಿಸಿದ ಹಿನ್ನಲೆಯಲ್ಲಿ ಎಲ್ಲಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಅಲ್ಲಿನ ಆಸ್ಪತ್ರೆಯಲ್ಲಿ ಆಧುನಿಕ ಸೌಲಭ್ಯಗಳಿದ್ದು, ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಸಾಧ್ಯವಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ದಯಾಮ್ ತಿಳಿಸಿದರು.
ಎಸಿಎಫ್ ಮೋಹನ್ ಕುಮಾರ್, ಮಾಗಲು ಯೋಗಾನಂದ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಎಂ.ಎಸ್. ಸುಂದರೇಶ್, ದಿವೀನ್ ಕಟ್ಟಿನಮನೆ, ಮದನ್ ಹುಣಸೇಹಳ್ಳಿ, ಗೋಕುಲ್ ಕಸ್ಕೇಮನೆ ಇದ್ದರು.
ಎಟಿಎಸ್ ಸಿಬ್ಬಂದಿಗೆ ಒಂದು ತಿಂಗಳಿನಿಂದ ಊರವರೇ ಹಣ ಒಟ್ಟು ಮಾಡಿ ಊಟ, ವಸತಿ ಕೊಡಿಸುತ್ತಿದ್ದಾರೆ. ಇಲಾಖೆ ಎನು ಮಾಡುತ್ತಿದೆ. ಅವರ ಓಡಾಟಕ್ಕೂ ವಾಹನ ನೀಡುತ್ತಿಲ್ಲ. ಅವರು ಹೇಗೆ ಕೆಲಸ ಮಾಡಬೇಕು. 24 ಗಂಟೆಯೊಳಗೆ ಆನೆ ಹಿಡಿಯದಿದ್ದರೆ ನಾವೇ ಕಾಡಿಗೆ ನುಗ್ಗಿ ಆನೆ ಹೊಡೆಯುತ್ತೇವೆ ಎಂದು ಮುಖಂಡ ಗೋರಿಗಂಡಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.