ADVERTISEMENT

ಬರಹದ ಸಮುಚ್ಚಯವೇ ಸಾಹಿತ್ಯ: ಜೈನ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿ

​ಪ್ರಜಾವಾಣಿ ವಾರ್ತೆ
Published 19 ಮೇ 2025, 20:18 IST
Last Updated 19 ಮೇ 2025, 20:18 IST
<div class="paragraphs"><p>ರಾಜ್ಯ ಮಟ್ಟದ ಪ್ರಪ್ರಥಮ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಗದಗದ ವಿದ್ವಾಂಸ ಅಪ್ಪಣ್ಣ ಹಂಜೆ, ಬೆಂಗಳೂರಿನ ಪ್ರಾದ್ಯಾಪಕಿ ಪದ್ಮಿನಿ ನಾಗರಾಜು, ವಿಜಯಪುರ-ಇಂಡಿಯ ಮಕ್ಕಳ ಸಾಹಿತಿ ದೇವೆಂದ್ರಪ್ಪ ಎಸ್.ಅಕ್ಕಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯತು.</p></div>

ರಾಜ್ಯ ಮಟ್ಟದ ಪ್ರಪ್ರಥಮ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಗದಗದ ವಿದ್ವಾಂಸ ಅಪ್ಪಣ್ಣ ಹಂಜೆ, ಬೆಂಗಳೂರಿನ ಪ್ರಾದ್ಯಾಪಕಿ ಪದ್ಮಿನಿ ನಾಗರಾಜು, ವಿಜಯಪುರ-ಇಂಡಿಯ ಮಕ್ಕಳ ಸಾಹಿತಿ ದೇವೆಂದ್ರಪ್ಪ ಎಸ್.ಅಕ್ಕಿ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯತು.

   

ಕಳಸ(ಬಾಳೆಹೊನ್ನೂರು): ‘ಪದ, ಶಬ್ದ, ಕಾವ್ಯ, ಗದ್ಯ, ತ್ರಿಪದಿ, ಸಾಂಗತ್ಯ ಸೇರಿದಂತೆ ಎಲ್ಲವೂ ಲಿಪಿಯಿಂದ ಸಂಯೋಜನೆಗೊಳ್ಳುತ್ತವೆ. ಲಿಪಿಯೇ ಬರಹಕ್ಕೆ ಮೂಲ. ಬರಹದ ಸಮುಚ್ಚಯವೇ ಸಾಹಿತ್ಯ’  ಎಂದು  ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ  ಶ್ರೀವರ್ಮ ಹೆಗ್ಗಡೆ ಹೇಳಿದರು.

ಇಲ್ಲಿನ ಬೈರವರಸರ ವೇದಿಕೆಯಲ್ಲಿ ಭಗವಾನ್ ಚಂದ್ರನಾಥಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಥಮ ಜೈನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಜೈನ ಸಾಹಿತ್ಯ ಅಗಾಧವಾಗಿದೆ. ಭರತ, ಬಾಹುಬಲಿಯ ಕಾಲದಲ್ಲೇ ಅಕ್ಷರ ಜ್ಞಾನ, ವ್ಯಾಕರಣ, ಛಂದಸ್ಸು, ಕಾವ್ಯ, ಅಲಂಕಾರ ಒಳಗೊಂಡ ಶಿಕ್ಷಣ ಜಾರಿಯಲ್ಲಿತ್ತು ಎಂದರು. ಶಾಂತರಸರು ಕಳಸಕ್ಕೆ ಬಂದು ಇಲ್ಲಿ ರಾಜಧಾನಿ ಸ್ಥಾಪಿಸಿ ಕಲಶ ರಾಜರೆಂದೇ ಪ್ರಸಿದ್ದರಾಗಿದ್ದರು. ಹೊರನಾಡಿನ ಸೀಮೆ ಅರಮನೆಯ ಪಾಳೆಯಗಾರ ವಂಶದ ಪಟ್ಟದ ದೇವತೆ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿ. ಇಲ್ಲಿ ಆಳಿದ ವಂಶಸ್ಥರ  ಗಡಿ ಸಾಕಷ್ಟು ದೂರದವರೆಗೆ ಚಾಚಿದೆ ಎಂದರು.

ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಜೋಷಿ ಮಾತನಾಡಿ, ‘ವಿಶ್ವ ಶಾಂತಿಗಾಗಿ ಜಗತ್ತು ಬಯಸುತ್ತಿದೆ. ವಚನದ ಮೇಲೂ ಜೈನ ಧರ್ಮ ಆಗಾಧ ಪ್ರಭಾವ ಬೀರಿದೆ. ಲೌಕಿಕ ಮತ್ತು ಆಗಮಿಕ ಆರಂಭವಾಗಿದ್ದು  ಜೈನ ವಿದ್ವಾಂಸರಿಂದ’ ಎಂದರು. 

 ಸಮ್ಮೇಳನದ ಅಧ್ಯಕ್ಷ ಶ್ರೀವರ್ಮ ಹೆಗ್ಗಡೆ ಅವರನ್ನು ತೆರದ ವಾಹನದಲ್ಲಿ ಅರಳಿಕಟ್ಟೆಯಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಯಿತು.

ಪ್ರೇಮ್ ಕುಮಾರ್ ರಚಿಸಿದ ‘ಮಾರ್ನಳ್ಳಿ ಅಂಚೆ ಕಚೇರಿ’, ಮೇಗುಂದದ ಸುಧಾಕರ್ ಜೈನ್ ರಚಿಸಿದ ‘ಜಿನತತ್ವ ಚಿಂತನ-ಮಂಥನ’ ಚಿಕ್ಕಬಾಸೂರು ಅನಂತು ರಚಿಸಿದ ಮತ್ತೆ ದ್ವಂದ್ವ, ಬಿ.ಕೆ.ವಿಜಯಲಕ್ಷ್ಮೀ ನಾಡಿಗ್ ರಚಿಸಿದ ‘ಕಾವ್ಯ ಸಿಂಚನ’ ಪುಸ್ತಕಗಳು ಹಾಗೂ ಜ್ಯೋತಿ ನಾಗೇಂದ್ರ ಅವರ ಯೂಟ್ಯೂಬ್ ಚಾನಲ್ ಬಿಡುಗಡೆ ಮಾಡಲಾಯಿತು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್,  ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆ.ರಾ.ಸತೀಶ್ಚಂದ್ರ, ಕೊಪ್ಪದ ಹರ್ಷ, ನರಸಿಂಹರಾಜಪುರದ ಪೂರ್ಣೇಶ್, ಬಿಜಿಎಸ್ ಸಂಸ್ಥೆಯ ಕುಲಸಚಿವ ಸಿ.ಕೆ.ಸುಬ್ಬರಾಯ, ಎಚ್.ಸಿ.ಅಣ್ಣಯ್ಯ, ಕೆ.ಸಿ.ಧರಣೇಂದ್ರ, ತಹಶೀಲ್ದಾರ್ ಕಾವ್ಯಾ ಇದ್ದರು.

ಮೂವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ

ಗದಗದ ವಿದ್ವಾಂಸ ಅಪ್ಪಣ್ಣ ಹಂಜೆ ಬೆಂಗಳೂರಿನ ಪ್ರಾದ್ಯಾಪಕಿ ಪದ್ಮಿನಿ ನಾಗರಾಜು ಹಾಗೂ ವಿಜಯಪುರ-ಇಂಡಿಯ ಮಕ್ಕಳ ಸಾಹಿತಿ ದೇವೆಂದ್ರಪ್ಪ ಎಸ್.ಅಕ್ಕಿ ಅವರಿಗೆ ಸಾಹಿತ್ಯ ಸಿರಿ ಹಾಗೂ ಜಿಲ್ಲೆಯ 19 ಜನರಿಗೆ ‘ಕನ್ನಡ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತಿಹಾಸ ಗೋಷ್ಠಿಯಲ್ಲಿ ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ‘ಕಳಸ ಬೈರವರಸರು’ ಕುರಿತು ಎಳೆನೀರಿನ ಮಹಾವೀರ್ ಅವರು ‘ಕಳಸ ಸಾಂತರರು’ ಕುರಿತು ವಿಷಯ ಮಂಡಿಸಿದರು. ಎಂ.ಎ.ಶೇಷಗಿರಿ ಶೇಖರ್ ಶೆಟ್ಟಿ ಭಾಗವಹಿಸಿದ್ದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಕವಿಗಳು ಕವನ ವಾಚನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.