ಕೊಪ್ಪ: ಇಲ್ಲಿನ ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ ಘಟಕಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಭಾರತಿ ಬಿ.ಎಂ. ಸೋಮವಾರ ಭೇಟಿ ನೀಡಿ, ಕ್ಲಬ್‌ನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಲಕ್ಕವಳ್ಳಿ ಮಂಜಪ್ಪ ನಾಯಕ್ ಸ್ಮಾರಕ ಲಯನ್ಸ್ ಸೇವಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಲಯನ್ಸ್ ಕ್ಲಬ್ ವತಿಯಿಂದ ಅತಿವೃಷ್ಟಿ ಬಾಧಿತರಿಗೆ ನೆರವಾಗುವ ಉದ್ದೇಶದಿಂದ ಮಂಗಳೂರಿನಲ್ಲಿ ಮೊಬೈಲ್ ಕಿಚನ್ ಆರಂಭಿಸಲಾಗಿತ್ತು. ಸಾವಿರಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ' ಎಂದರು.
ಅನಿತಾ ಎನ್.ರಾವ್ ಮಾತನಾಡಿ, 'ಲಯನ್ಸ್ ಸಹ್ಯಾದ್ರಿ ಸಂಸ್ಥೆಯಲ್ಲಿ 72 ಮಂದಿ ಸದಸ್ಯರಿದ್ದಾರೆ.
ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ₹950ಕ್ಕೆ ಡಯಾಲಿಸಿಸ್ ಮಾಡಲಾಗುತ್ತಿದೆ. ಇದಕ್ಕಾಗಿ ದಾನಿಗಳ ನೆರವು ಪಡೆಯಲಾಗಿದೆ. ಇನ್ನಷ್ಟು ದಾನಿಗಳ ನೆರವು ಲಭಿಸಿದರೆ ರೋಗಿಗಳಿಗೆ ₹600 ದರಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ' ಎಂದರು.
ಲಯನ್ಸ್ ಕ್ಲಬ್ ಕೊಪ್ಪ ಸಹ್ಯಾದ್ರಿ ಅಧ್ಯಕ್ಷ ಡಿ.ಎನ್.ಜಯಂತ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಂತೋಷ್, ಖಜಾಂಚಿ ಕೆ.ಆರ್.ಚಂದ್ರಶೇಖರ್, ಕೆ.ಆರ್.ಗೋಪಾಲಗೌಡ, ನಟರಾಜ್ ಆರ್. ರಾವ್, ಎಚ್.ಎಸ್.ಕಳಸಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.