ಶೆಟ್ಟಿಕೊಪ್ಪ(ಎನ್.ಆರ್.ಪುರ): ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ನೆರಳೆಕೊಪ್ಪದ ಮಳಲಿ ಗ್ರಾಮದಲ್ಲಿ ಮೂರು ದಿನಗಳಿಂದ ಒಂಟಿ ಸಲಗದ ಹಾವಳಿ ಹೆಚ್ಚಾಗಿದ್ದು ಅಡಿಕೆ, ಬಾಳೆ ಬೆಳೆ ನಾಶ ಮಾಡಿದೆ.
ಮಳಲಿ ಗ್ರಾಮದ ಕೃಷ್ಣಮೂರ್ತಿ ಎಂಬುವರ ತೋಟಕ್ಕೆ ಬಂದ ಒಂಟಿ ಸಲಗ 14ಕ್ಕೂ ಹೆಚ್ಚು ಫಸಲು ಬರುವ ಅಡಿಕೆ ಮರ, ಗಿಡ ಸೇರಿ 20 ಅಡಿಕೆ ಮರಗಳನ್ನು ಧರೆಗುರುಳಿಸಿದೆ. 200ಕ್ಕೂ ಹೆಚ್ಚು ಪುಟ್ ಬಾಳೆ, ಕರಬಾಳೆ ಹಾಗೂ ಮೈಸೂರು ಬಾಳೆಯ ಗಿಡಗಳನ್ನು ತಿಂದು ಹಾಕಿದೆ. ಸಮೀಪದ ಅರಣ್ಯದಿಂದ ಬರುವ ಒಂಟಿ ಸಲಗ ದೊಡ್ಡಕೆರೆಯಲ್ಲಿ ಬೀಡು ಬಿಟ್ಟಿದ್ದು, ಆಗಾಗ ತೋಟಕ್ಕೆ ಬಂದು ಗಿಡಗಳನ್ನು ನಾಶ ಮಾಡಿ ಪುನಃ ಕಾಡಿಗೆ ಹೋಗಿ ಸೇರಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಅರಣ್ಯ ಇಲಾಖೆಯವರು ಒಂಟಿ ಸಲಗವನ್ನು ಅಭಯಾರಣ್ಯ ಪ್ರದೇಶಕ್ಕೆ ಓಡಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.