
ನರಸಿಂಹರಾಜಪುರ: ಅಡಿಕೆ ದರೋಡೆ ಪ್ರಕರಣ ಭೇದಿಸಿರುವ ಪೊಲೀಸರು, ಮಾಲು ಸಮೇತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾವತಿ ತಾಲ್ಲೂಕು ಆಗರದಹಳ್ಳಿ ಕ್ಯಾಂಪ್‌ನ ನಿವಾಸಿ ವಿರೇಶ, ಮಹೇಶ, ಎಂ.ಕಾರ್ತಿಕ ಹಾಗೂ ಆರ್. ಶ್ರೀಹರಿ ಬಂಧಿತರು.
ತಾಲ್ಲೂಕಿನ ಬಾಳೆಹೊನ್ನೂರು– ನರಸಿಂಹರಾಜಪುರ ಮಾರ್ಗಮಧ್ಯೆ ಬರುವ ಅಳೇಹಳ್ಳಿ ಗ್ರಾಮದಲ್ಲಿ ಡಿ. 12ರಂದು ಪಿಕಪ್ ವಾಹನ ಅಡ್ಡಗಟ್ಟಿ ವಾಹನದ ಮಾಲೀಕ ಕೆ. ರವಿ ಹಾಗೂ ಚಾಲಕ ವಿಶ್ವಾಸ್ ಮೇಲೆ ಹಲ್ಲೆ ನಡೆಸಿ, 44 ಕ್ವಿಂಟಲ್ (67 ಚೀಲ) ಹಸಿ ಅಡಿಕೆ, ₹29 ಸಾವಿರ ನಗದು ಹಾಗೂ 2 ಮೊಬೈಲ್ ಫೋನ್‌ಗಳನ್ನು ದರೋಡೆ ಮಾಡಲಾಗಿತ್ತು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ದರೋಡೆ ಮಾಡಿದ್ದ ₹2.56 ಲಕ್ಷ ಮೌಲ್ಯದ 44 ಕ್ವಿಂಟಲ್ ಅಡಿಕೆ, ₹3 ಲಕ್ಷ ಮೌಲ್ಯದ ಬೊಲೆರೋ ವಾಹನ, ಅಂದಾಜು ₹15 ಸಾವಿರ ಮೊತ್ತದ ಬೈಕ್ ಸೇರಿ ₹5.71 ಲಕ್ಷದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗುರುದತ್ ಕಾಮತ್, ಸಬ್ ಇನ್‌ಸ್ಪೆಕ್ಟರ್ ಬಿ.ಎಸ್. ನಿರಂಜನ್ ಗೌಡ, ಅಪರಾಧ ವಿಭಾಗದ ಸಬ್ ಇನ್‌ಸ್ಪೆಕ್ಟರ್ ಎನ್.ಎ. ಜ್ಯೋತಿ, ಸಿಬ್ಬಂದಿಗಳಾದ ಮಧು, ಎಸ್.ಜಿ. ಸೋಮೇಶ, ಯುಗಾಂಧರ, ಪಿ.ಎ. ಬಿನು, ಅಮಿತ್ ಚೌಗುಲೆ, ದೇವರಾಜ, ರೇವಗೊಂಡ ಅರಾಧರ, ಎಂ.ಸಿ. ಮನು, ಮುರುಗೇಶ, ಚಂದ್ರಕಾಂತ ಪೂಜಾರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.