ADVERTISEMENT

ಗುಜರಾತ್‍ನಿಂದ ಸೈಕಲ್ ಯಾತ್ರೆ ಆರಂಭಿಸಿದ ಮಾಜಿ ಯೋಧ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 19:30 IST
Last Updated 13 ಆಗಸ್ಟ್ 2022, 19:30 IST
ಸೈಕಲ್ ಯಾತ್ರೆ ಕೈಗೊಂಡಿರುವ ಗುಜರಾತ್‌ನ ಮಾಜಿ ಯೋಧ ಬ್ರಿಜೇಶ್ ಶರ್ಮಾ ಕೊಟ್ಟಿಗೆಹಾರಕ್ಕೆ ತಲುಪಿದ್ದು, ಸಂಜಯ್‍ಗೌಡ ಅವರ ಮನೆಯಲ್ಲಿ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಲಾಯಿತು
ಸೈಕಲ್ ಯಾತ್ರೆ ಕೈಗೊಂಡಿರುವ ಗುಜರಾತ್‌ನ ಮಾಜಿ ಯೋಧ ಬ್ರಿಜೇಶ್ ಶರ್ಮಾ ಕೊಟ್ಟಿಗೆಹಾರಕ್ಕೆ ತಲುಪಿದ್ದು, ಸಂಜಯ್‍ಗೌಡ ಅವರ ಮನೆಯಲ್ಲಿ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಲಾಯಿತು   

ಕೊಟ್ಟಿಗೆಹಾರ: ಗುಜರಾತ್‍ನಿಂದ ಸೈಕಲ್ ಯಾತ್ರೆ ಆರಂಭಿಸಿದ ಮಾಜಿ ಯೋಧರೊಬ್ಬರು ಕೊಟ್ಟಿಗೆಹಾರ ತಲುಪಿದ್ದಾರೆ.

ಗುಜರಾತ್‍ನ ಮಾಜಿ ಯೋಧ ಬ್ರಿಜೇಶ್ ಶರ್ಮಾ 2019ರಲ್ಲಿ ಅಖಿಲ ಭಾರತ ಯಾತ್ರೆ ಕೈಗೊಂಡಿದ್ದು, ಈವರೆಗೆ 36 ಸಾವಿರ ಕಿ.ಮೀ. ಸಂಚರಿಸಿ ಶುಕ್ರವಾರ ಕೊಟ್ಟಿಗೆಹಾರ ತಲುಪಿದ್ದಾರೆ. ಸ್ಥಳೀಯರಾದ ಸಂಜಯಗೌಡ ಅವರು ತಮ್ಮ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದು, ಶನಿವಾರ ಬೆಳಿಗ್ಗೆ ಗ್ರಾಮಸ್ಥರೆಲ್ಲರೂ ಕೂಡಿ ಮಾಜಿ ಯೋಧ ಬ್ರಿಜೇಶ್ ಶರ್ಮಾ ಅವರೊಂದಿಗೆ ‘ಹರ್ ಘರ್ ತಿರಂಗಾ’ ಅಭಿಯಾನ ನಡೆಸಿದರು.

ಬ್ರಿಜೇಶ್ ಶರ್ಮಾ ಅವರು ಸಾವಯವ ಕೃಷಿಯ ಮಹತ್ವ ಹೇಳುತ್ತಾ ಸೈಕಲ್ ಯಾತ್ರೆ ಮಾಡುತ್ತಿದ್ದಾರೆ. ಶಾಲೆಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ನಿಷೇಧ, ಪರಿಸರ ರಕ್ಷಣೆಯ ಕುರಿತು ಮಾಹಿತಿ ನೀಡುತ್ತಿದ್ದಾರೆ. ಗುಜರಾತ್, ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ಸಂಚರಿಸಿ ಕರ್ನಾಟಕಕ್ಕೆ ಬಂದ ಅವರು, ಮುಂದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಪ್ರಯಾಣ ನಡೆಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.