ADVERTISEMENT

ಶೃಂಗೇರಿ | ನೋವುಂಡು ಅಮೃತ ನೀಡಿದ ಬಾಲಗಂಗಾಧರನಾಥ ಸ್ವಾಮೀಜಿ: ಗುಣನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:10 IST
Last Updated 13 ಜನವರಿ 2026, 6:10 IST
ಶೃಂಗೇರಿ ಆದಿಚುಂಚನಗಿರಿಯ ಮಠದ ಸಭಾಂಗಣದಲ್ಲಿ ಸೋಮವಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೂರ್ತಿಗೆ ಮಠದ ಪೀಠಾಧಿಪತಿ ಗುಣನಾಥ ಸ್ವಾಮೀಜಿ ಪೂಜೆ ಸಲ್ಲಿಸಿದರು
ಶೃಂಗೇರಿ ಆದಿಚುಂಚನಗಿರಿಯ ಮಠದ ಸಭಾಂಗಣದಲ್ಲಿ ಸೋಮವಾರ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೂರ್ತಿಗೆ ಮಠದ ಪೀಠಾಧಿಪತಿ ಗುಣನಾಥ ಸ್ವಾಮೀಜಿ ಪೂಜೆ ಸಲ್ಲಿಸಿದರು   

ಶೃಂಗೇರಿ: ‘ಆದಿಚುಂಚನಗಿರಿ ಮಹಾಸಂಸ್ಥಾನದ ಬಾಲಗಂಗಾಧರನಾಥ ಸ್ವಾಮೀಜಿ ಅವರು ನೂರಾರು ಅಡೆ ತಡೆಗಳನ್ನು ಮೀರಿ ಸಮಾಜವನ್ನು ಕಟ್ಟಿ ಬೆಳೆಸಿದರು. ಕಷ್ಟಗಳನ್ನು ನುಂಗಿ ಸಮಾಜಕ್ಕೆ ಅಮೃತವನ್ನೇ ನೀಡಿ, ಮಾತೃ ವಾತ್ಸಲ್ಯವನ್ನು ಹಾರೈಸಿ ಆಶೀರ್ವಹಿಸಿದವರು' ಎಂದು ಆದಿಚುಂಚನಗಿರಿ ಶಾಖಾ ಮಠದ ಪೀಠಾಧಿಪತಿ ಗುಣನಾಥ ಸ್ವಾಮೀಜಿ ಹೇಳಿದರು.

ಶೃಂಗೇರಿ ಆದಿಚುಂಚನಗಿರಿಯ ಬಿಜಿಎಸ್ ಕಾಲೇಜಿನ ಸಭಾಂಗಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 81ನೇ ಆರಾಧನೆ ಮತ್ತು ಜಯಂತ್ಯುತ್ಸವದ ಪ್ರಯುಕ್ತ ಅಕ್ಷರಸಂತ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗುರುಗಳು ಹಗಲಿರುಳು ತಮ್ಮ ಸಮಯವನ್ನು ಸಮಾಜದ ದೀನ, ದಲಿತ, ದುರ್ಬಲರ ಸೇವೆಗಾಗಿ ಮುಡಿಪಿಟ್ಟಿದ್ದರು.  ತಮ್ಮ ಆರೋಗ್ಯವನ್ನು ಲೆಕ್ಕಿಸಿದೆ ಸೇವೆಯೇ ಪೂಜೆ ಎಂಬ ಧ್ಯೇಯ ವಾಕ್ಯದೊಂದಿಗೆ ಸರ್ವರಿಗಾಗಿ ಜೀವಿಸಿದ್ದರು. ಆದಿಚುಂಚನಗಿರಿ ಕ್ಷೇತ್ರವನ್ನು ಜಗತ್ತಿಗೇ ಪರಿಚಯಿಸಿ ಪ್ರಪಂಚದ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು’ ಎಂದರು.

ADVERTISEMENT

‘ಎಷ್ಟೋ ಯುವಕರನ್ನು ಕರೆದು ಆಶ್ರಯ, ಅನ್ನ ನೀಡಿದಲ್ಲದೇ ಸಂಸ್ಕೃತ ಕಲಿಯುವ ಅವಕಾಶವನ್ನು ಒದಗಿಸಿ ಅವರ ಏಳ್ಗೆಗೆ ಕಾರಣರಾದವರು. ಮೇಲೂ–ಕೀಳು ಎನ್ನದೇ ಎಲ್ಲಾ ಧರ್ಮದವರೂ ಸಂಸ್ಕೃತ ಭಾಷೆಯನ್ನು ಓದಿ ತಿಳಿಯುವ ಅವಕಾಶ ನೀಡಿದ್ದರು' ಎಂದರು.

ಕಾರ್ಯಕ್ರಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಮಹಾ ರಥೋತ್ಸವ, ಭಜನೆ, ನಾಟಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ದುಗ್ಗಪ್ಪ ಗೌಡ, ಎಚ್.ಎಂ.ಮಂಜುನಾಥ ಗೌಡ, ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಕೆ.ಸಿ ನಾಗೇಶ್, ದರ್ಶಿನಿ ಸಂಯುಕ್ತ ಪ್ರೌಢಶಾಲೆ ಮುಖ್ಯಶಿಕ್ಷಕ ಕಿರಣ್, ವಿಜ್ಞಾನ ವಿಭಾಗದ ಮುಖ್ಯಸ್ಥ ಸಂಜಯ್ ಮಿರ್ಜಿ, ರಮೇಶ್, ಹರೀಶ್, ಸುನೀತಾ ನವೀನ್ ಗೌಡ, ಧನ್ಯಕುಮಾರ್, ಪೂರ್ಣೇಶ್, ಆದರ್ಶ, ಬೋಧಕ, ಬೋಧಕೇತರ ಸಿಬ್ಬಂದಿ  ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶೃಂಗೇರಿ ಆದಿಚುಂಚನಗಿರಿಯ ಮಠದ ಸಭಾಂಗಣದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ 81ನೇ ಆರಾಧನೆ ಮತ್ತು ಜಯಂತ್ಯುತ್ಸವದ ಪ್ರಯುಕ್ತ ಅಕ್ಷರ ಸಂತ ದಿನ ಕಾರ್ಯಕ್ರಮವನ್ನು ಮಠದ ಗುರುಗಳಾದ ಗುಣನಾಥ ಸ್ವಾಮೀಜಿಯವರು ಉದ್ಘಾಟಿಸಿದರು

ಬಾಲಗಂಗಾಧರನಾಥ ಸ್ವಾಮೀಜಿ ಜಯಂತ್ಯುತ್ಸವದ ಪ್ರಯುಕ್ತ ಅಕ್ಷರಸಂತ ದಿನ 5 ಕೋಟಿ ಗಿಡ ನೆಟ್ಟು ಬೆಳೆಸುವ ನಿರ್ಧಾರ ಕೈಗೊಂಡಿದ್ದ ಸ್ವಾಮೀಜಿ  ಪ್ರಪಂಚದ ಭೂಪಟದಲ್ಲಿ ಆದಿಚುಂಚನಗಿರಿ ಕ್ಷೇತ್ರ ಪರಿಚಯಿಸಿದ ಸಂತ.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಬಾಲಗಂಗಾಧರನಾಥಸ್ವಾಮೀಜಿ ಶೃಂಗೇರಿಯಂತಹ ಪುಣ್ಯಸ್ಥಳವಾದ ತುಂಗಾ ದಡದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖೆಯನ್ನು ಸ್ಥಾಪಿಸಿ ಕೋಟಿ ಅರ್ಚನೆಯಂತಹ ಧಾರ್ಮಿಕ ಕಾರ್ಯ ನೆರವೇರಿಸಿದ್ದರು.
ಗುಣನಾಥ ಸ್ವಾಮೀಜಿ ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.