ADVERTISEMENT

ಶಾಲಾ ಮಕ್ಕಳಿಗೆ ಭತ್ತದ ನಾಟಿ ಪ್ರಾತ್ಯಕ್ಷಿತೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2023, 15:51 IST
Last Updated 9 ಆಗಸ್ಟ್ 2023, 15:51 IST
ಬಾಳೆಹೊನ್ನೂರು ಸಮೀಪದ ಕುಂದೂರಿನ ಪ್ರದೀಪ್ ಹೆಗ್ಡೆ ಗದ್ದೆಯಲ್ಲಿ ಜಯಪುರ ರೋಟರಿ ಕ್ಲಬ್ ವತಿಯಿಂದ ಕುಂದೂರು ಶಾಲಾ ಮಕ್ಕಳಿಗೆ ಭತ್ತದ ಸಸಿಮಡಿ ತಯಾರಿ,ನಾಟಿ ಕುರಿತ ಪ್ರಾತಕ್ಷಿತೆಯನ್ನು ಆಯೋಜಿಸಲಾಗಿತ್ತು
ಬಾಳೆಹೊನ್ನೂರು ಸಮೀಪದ ಕುಂದೂರಿನ ಪ್ರದೀಪ್ ಹೆಗ್ಡೆ ಗದ್ದೆಯಲ್ಲಿ ಜಯಪುರ ರೋಟರಿ ಕ್ಲಬ್ ವತಿಯಿಂದ ಕುಂದೂರು ಶಾಲಾ ಮಕ್ಕಳಿಗೆ ಭತ್ತದ ಸಸಿಮಡಿ ತಯಾರಿ,ನಾಟಿ ಕುರಿತ ಪ್ರಾತಕ್ಷಿತೆಯನ್ನು ಆಯೋಜಿಸಲಾಗಿತ್ತು   

ಕುಂದೂರು (ಬಾಳೆಹೊನ್ನೂರು): ಇಲ್ಲಿನ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಡ್ಡದಬಂಗ್ಲೆ ಪ್ರದೀಪ್ ಹೆಗ್ಡೆ ಅವರ ಗದ್ದೆಯಲ್ಲಿ ಭತ್ತದ ಸಸಿಮಡಿ ತಯಾರಿ, ನಾಟಿ ಕುರಿತ ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಆಯೋಜಿಸಿತ್ತು.

ಕುಂದೂರಿನ ಕೃಷಿಕ ಗುರುವಪ್ಪಗೌಡ, ಮುಂದಿನ ಪೀಳಿಗೆಯ ಮಕ್ಕಳಿಗೆ ಭತ್ತ ಬೆಳೆಯುವು ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಈಗಿನ ಯುವಕರು ಕೃಷಿಯಿಂದ ವಿಮುಖರಾಗಿ ಪಟ್ಟಣ ಸೇರುತ್ತಿದ್ದಾರೆ. ಮಲೆನಾಡಿನ ಗದ್ದೆಗಳು ನಿಧಾನವಾಗಿ ಅಡಿಕೆ, ಕಾಫಿ ತೋಟಗಳಾಗುತ್ತಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಭತ್ತದ ಕೃಷಿ ಮರೆಯಾಗುವುದು ನಿಶ್ಚಿತ. ಭತ್ತ ಬದುಕಿನ ಭಾಗವಾಗಿದ್ದು ಗದ್ದೆ ಹೊಂದಿರುವ ಎಲ್ಲರೂ ಕನಿಷ್ಟ ಮನೆಯ ಖರ್ಚಿಗಾಗುವಷ್ಟಾದರೂ ಬೆಳೆಯಬೇಕು ಎಂದು ಸಲಹೆ ನೀಡಿದರು.

ಸಂದರ್ಭದಲ್ಲಿ ರೋಟರಿ ಸದಸ್ಯರಿಗೆ ಕೆಸರುಗದ್ದೆ ವಾಲಿಬಾಲ್, ಓಟ, ಹಗ್ಗಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಿಕೆ ಓಡೆಯುವ ಸ್ಪರ್ಧೇಗಳನ್ನು ಆಯೋಜಿಸಲಾಗಿತ್ತು.

ADVERTISEMENT

ಜಯಪುರ ರೋಟರಿ ಕ್ಲಬ್ ಅಧ್ಯಕ್ಷೆ ಸ್ಮಿತಾ ಸುರೇಶ್,ಕಾರ್ಯದರ್ಶಿ ರಮೇಶ್, ಖಜಾಂಚಿ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.