ADVERTISEMENT

ನರಸಿಂಹರಾಜಪುರ: ಕ್ಷೌರಿಕ ವೃತ್ತಿ ತಾತ್ಕಾಲಿಕ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 9:03 IST
Last Updated 9 ಜುಲೈ 2020, 9:03 IST

ನರಸಿಂಹರಾಜಪುರ: ಕ್ಷೌರಿಕ ವೃತ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎಲ್ಲಾ ಕ್ಷೌರಿಕ ಅಂಗಡಿಗಳನ್ನು ಇದೇ 9ರಿಂದ ಮುಚ್ಚಲು ತಾಲ್ಲೂಕು ಸವಿತಾ ಸಮಾಜ ನಿರ್ಧಾರ ತೆಗೆದುಕೊಂಡಿದೆ.

ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ತಮಗೆ ಮತ್ತು ತಮ್ಮ ಕುಟುಂಬ ಗಳಿಗೂ ಸೋಂಕು ತಗಲಬಹುದೆಂಬ ಮುಂದಾಲೋಚನೆಯಿಂದ ಕ್ಷೌರಿಕ ವೃತ್ತಿಗೆ ಸಂಬಂಧಿಸಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲು ನಿರ್ಧರಿಸಿತು. ಬಾಗಿಲು ಮುಚ್ಚಿ ಅಂಗಡಿಯ ಒಳಭಾಗದಲ್ಲಿ ಅಥವಾ ಮನೆಗಳಿಗೆ ತೆರಳಿ ಕೇಶವಿನ್ಯಾಸ, ಶೇವಿಂಗ್ ಮಾಡಬಾರದು. ಒಂದು ವೇಳೆ ಸವಿತಾ ಸಮಾಜದ ಕಣ್ಣು ತಪ್ಪಿಸಿ ಕಾರ್ಯನಿರ್ವಹಿಸುವುದು ಕಂಡು ಬಂದಲ್ಲಿ ದಂಡ ವಿಧಿಸುವುದರ ಜತೆಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ADVERTISEMENT

ತಾಲ್ಲೂಕು ಸವಿತಾ ಸೇವಾ ಸಮಾ ಜದ ಗೌರವ ಅಧ್ಯಕ್ಷ ಎಲ್.ಎನ್.ಎಸ್.ನಾಗರಾಜ್, ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಎಸ್.ಎಲ್.ವಿ ವೆಂಕ ಟೇಶ್, ಖಂಜಾಂಚಿ ಶ್ರೀನಿವಾಸ್, ಉಪಾ ಧ್ಯಕ್ಷ ಜಯಚಂದ್ರ, ಜಿಲ್ಲಾ ಕಾರ್ಯದರ್ಶಿ ಬಿ.ಎನ್.ನಾಗರಾಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.