ಚಿಕ್ಕಮಗಳೂರು: 207ನೇ ಭೀಮಾ ಕೋರೆಂಗಾವ್ ವಿಜಯೋತ್ಸವ ಬುಧವಾರ ನಡೆಯಲಿದ್ದು, ದಲಿತ ಒಕ್ಕೂಟಗಳ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೈಕ್ ರ್‍ಯಾಲಿ ನಡೆಸಿದರು.
ನಗರದ ತೊಗರಿಹಂಕಲ್ ಸರ್ಕಲ್‌ನಿಂದ ಕೆಇಬಿ ವೃತ್ತ, ಅರಳಿಮರ ರಸ್ತೆ, ಎಂ.ಜಿ.ರಸ್ತೆ, ಅಜಾದ್ ಪಾರ್ಕ್, ಬಿ.ಆರ್. ಅಂಬೇಡ್ಕರ್ ರಸ್ತೆ, ಕೆ.ಎಂ.ರಸ್ತೆಯಲ್ಲಿ ಬೈಕ್ ರ‍್ಯಾಲಿ ನಡೆಯಿತು. ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ನಗರದ ಎಲ್ಲೆಡೆ ನೀಲಿ ಬಾವುಟಗಳು ರಾರಾಜಿಸುತ್ತಿದ್ದು, ಬುಧವಾರ ಕೆಇಬಿ ವೃತ್ತದಿಂದ ಮೆರವಣಿಗೆ ಆರಂಭವಾಗಲಿದೆ. ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್‌ವರೆಗೆ ಡಿ.ಜೆ ಮತ್ತು ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 4.30ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಜೇವರ್ಗಿಯ ಮರುಳ ಶಂಕರ ದೇವರ ಗುರುಪೀಠ ಸಿದ್ಧಬಸವ ಕಬೀರ ಸ್ವಾಮೀಜಿ, ಭೀಮ್ ಆರ್ಮಿ ಸಂಘಟನೆ ಸಂಸ್ಥಾಪಕ, ಲೋಕಸಭೆ ಸದಸ್ಯ ಚಂದ್ರಶೇಖರ್ ಅಜಾದ್ ರಾವಣ್, ಲೋಕಸಭೆ ಸದಸ್ಯ ಶಶಿಕಾಂತ್ ಸೇಂಥಿಲ್, ಸಾಮಾಜಿಕ ಹೋರಾಟಗಾರ ಜಕ್ಕಪ್ಪನವರ, ಅಂಬೇಡ್ಕರ್ ವಾದಿ ದು.ಸರಸ್ವತಿ ಭಾಗವಹಿಸಲಿದ್ದಾರೆ ಎಂದು ಒಕ್ಕೂಟಗಳ ಸಮಿತಿ ಸದಸ್ಯ ಅನೀಲ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.