ಸಾವು (ಪ್ರಾತಿನಿಧಿಕ ಚಿತ್ರ)
ಬೀರೂರು (ಕಡೂರು): ಬೈಕ್‌ಗೆ ಗೂಡ್ಸ್ ಆಟೊ ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.
ಪಟ್ಟಣದ ಮಾರ್ಗದಕ್ಯಾಂಪ್ ಸಮೀಪದ ಕೆಂಚರಾಯಹಾಳು ನಿವಾಸಿ ಮಹಬೂಬ್ ಪಾಷ (51) ಮೃತಪಟ್ಟವರು.
ಮಹಬೂಬ್ ಅವರು ಮಂಗಳವಾರ ರಾತ್ರಿ ಪಟ್ಟಣದ ಮಹಾತ್ಮಗಾಂಧಿ ವೃತ್ತದ ಕಡೆಗೆ ಹೋಗುತ್ತಿರುವ ವೇಳೆ, ತರೀಕೆರೆ ಕಡೆಯಿಂದ ಬಂದ ಗೂಡ್ಸ್ ಆಟೊ ಬೈಕ್‌ನ ಹಿಂಬದಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಪರಾರಿಯಾಗಿದೆ.
ಇದರಿಂದಾಗಿ ಮಹಬೂಬ್ ಪಾಷ ಅವರ ತಲೆ ಮತ್ತು ಕೈ–ಕಾಲುಗಳಿಗೆ ತೀವ್ರ ಗಾಯವಾಗಿತ್ತು. ಅಕ್ಕಪಕ್ಕದವರು ತಕ್ಷಣವೇ ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಶಿವಮೊಗ್ಗಕ್ಕೆ ಶಿಫಾರಸು ಮಾಡಿದ್ದಾರೆ. ನಂತರ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸುವಂತೆ ಸೂಚಿಸಿದರು. ಆದರೆ, ತುಮಕೂರು ಬಳಿ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟರು. ಈ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.