ADVERTISEMENT

ಧರ್ಮಾಚರಣೆಯಿಂದ ನೆಮ್ಮದಿಯ ಬದುಕು: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 12:23 IST
Last Updated 6 ಏಪ್ರಿಲ್ 2024, 12:23 IST
ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀ, ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಶ್ರೀ ಇದ್ದರು
ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಜಾಗೃತಿ ಸಮಾರಂಭದಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಶ್ರೀ, ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಶ್ರೀ ಇದ್ದರು    

ಬೀರೂರು: ದೇವರು ಸೃಷ್ಟಿಸಿದ ಪ್ರಕೃತಿಯಿಂದ ಎಲ್ಲವನ್ನೂ ಬಳಸಿಕೊಳ್ಳುವ ಮನುಷ್ಯರು ದೈವ ಮತ್ತು ಪ್ರಕೃತಿಯ ಮೇಲೆ ಕೃತಜ್ಞತಾ ಭಾವ ಉಳಿಸಿಕೊಂಡು ಬಾಳಿದರೆ ಜೀವನ ಸುಖಮಯವಾಗಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಶ್ರೀ ಅಭಿಪ್ರಾಯಪಟ್ಟರು.

ಬೀರೂರು ಸಮೀಪದ ಹೊಗರೆಕಾನು ಗಿರಿಯಲ್ಲಿ ಶ್ರೀ ಸಿದ್ಧೇಶ್ವರಸ್ವಾಮಿ ದೇವಾಲಯದ ಮಂಡಲ ಪೂಜೆಯ ಅಂಗವಾಗಿ ಶನಿವಾರ ನಡೆದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಮುಖ್ಯ ಎಂದರು.

ಮಾನವ ಜನ್ಮ ಶ್ರೇಷ್ಠವಾಗಿರುವುದರಿಂದ ಹುಟ್ಟಿದ ಮೇಲೆ ಶಿವಜ್ಞಾನ ಪ್ರಾಪ್ತಿ ಮತ್ತು ಗುರುಕಾರುಣ್ಯಕ್ಕಾಗಿ ಪ್ರಯತ್ನಿಸಬೇಕು. ಅರಿತು ಆಚರಿಸಿ ಬದುಕಿದರೆ ಜೀವನ ಶ್ರೇಯಸ್ಕರವಾಗುತ್ತದೆ, ಮರೆತು ಮಲಗಿದರೆ ಬದುಕು ದುರ್ಭರಗೊಳ್ಳುತ್ತದೆ. ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮ ಕಾಲ ಕಾಲದಲ್ಲಿ ಸಮಾಜಕ್ಕೆ ಅಗತ್ಯ ಮಾರ್ಗದರ್ಶನ ನೀಡಿದೆ ಎಂದು ಅವರು ಹೇಳಿದರು.

ADVERTISEMENT

ನೇತೃತ್ವ ವಹಿಸಿದ್ದ ರಂಭಾಪುರಿ ಖಾಸಾ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಅಹಿಂಸಾದಿ ಧ್ಯಾನ ಪರ್ಯಂತರ ಚಿಂತನೆಗಳು ಬಾಳಿಗೆ ಬೆಳಕು ತೋರುತ್ತವೆ ಎಂದರು.

ಹುಣಸಘಟ್ಟ ಹಾಲುಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಶ್ರೀ, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ತೆಂಡೇಕೆರೆ ಗಂಗಾಧರ ಶಿವಾಚಾರ್ಯ ಶ್ರೀ ಹಾಗೂ ಹಣ್ಣೆ ಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಉಮಾಶಂಕರ್, ಚಂದ್ರಶೇಖರ, ರಾಜು ತರೀಕೆರೆ, ಉಮೆಶ ಹೊಗರೆಹಳ್ಳಿ, ರೇಣುಕಯ್ಯ ಹೊಗರೇಹಳ್ಳಿ, ರುದ್ರಯ್ಯ ಹಾಗೂ ಸಿದ್ಧಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.