ADVERTISEMENT

ನರಸಿಂಹರಾಜಪುರ:‘ಬಿಜೆಪಿಯವರು ಹಿಂದುತ್ವ ವಿರೋಧಿಗಳು’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:48 IST
Last Updated 5 ಫೆಬ್ರುವರಿ 2023, 7:48 IST
ನರಸಿಂಹರಾಜಪುರದಲ್ಲಿ ಜೆಡಿಎಸ್ ಘಟಕದ ವತಿಯಿಂದ ನಡೆದ ಮಹಿಳಾ ಸಮಾವೇಶ ಹಾಗೂ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್. ಶೆಟ್ಟಿ ಮಾತನಾಡಿದರು
ನರಸಿಂಹರಾಜಪುರದಲ್ಲಿ ಜೆಡಿಎಸ್ ಘಟಕದ ವತಿಯಿಂದ ನಡೆದ ಮಹಿಳಾ ಸಮಾವೇಶ ಹಾಗೂ ಬಾಗಿನ ನೀಡುವ ಕಾರ್ಯಕ್ರಮದಲ್ಲಿ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್. ಶೆಟ್ಟಿ ಮಾತನಾಡಿದರು   

ನರಸಿಂಹರಾಜಪುರ: ಹಿಂದುತ್ವದ ಪ್ರತಿಪಾದಕರಂತೆ ವರ್ತಿಸುವ ಬಿಜೆಪಿಯವರು ಹಿಂದೂ ದೇವರನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಹಿಂದುತ್ವದ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರ ಜೆಡಿಎಸ್ ನಿಯೋಜಿತ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ ಆರೋಪಿಸಿದರು.

ಇಲ್ಲಿನ ವಾಸವಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಮಹಿಳಾ ಸಮಾವೇಶ ಮತ್ತು ಬಾಗಿನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬಿಜೆಪಿಯವರು ರಾಮನ ಹೆಸರಿನಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದರು. ನಂತರ ಆಂಜನೇಯನನ್ನು ರಾಜಕೀಯ ಎಳೆದು ತಂದರು. ಪ್ರಸ್ತುತ ಸತ್ಯನಾರಾಯಣ ಸ್ವಾಮಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಹಿಂದೂ ಧರ್ಮಕ್ಕೆ ಮಾಡುವ ಅಪಚಾರವಾಗಿದೆ ಎಂದು ಟೀಕಿಸಿದರು.

ADVERTISEMENT

ಶೃಂಗೇರಿ ಕ್ಷೇತ್ರ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ‘ಬಿಜೆಪಿಯವರು ಯುವಕರಿಗೆ ಧರ್ಮದ ಅಮಲನ್ನು ಉಣಿಸುತ್ತಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ಬದಲು ಕೋಮುದಳ್ಳುರಿಯ ಅಸ್ತ್ರ ನೀಡುತ್ತಿದ್ದಾರೆ’ ಎಂದರು.

ಶೃಂಗೇರಿ ಕ್ಷೇತ್ರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಅರುಣ್ ಮಾತನಾಡಿ, ಕ್ಷೇತ್ರದಲ್ಲಿ ಸುಧಾಕರ್ ಶೆಟ್ಟಿಯವರು ಎಲ್ಲ ಮಹಿಳೆಯರಿಗೆ ತವರಿನ ಬಾಗಿನ ಸಮರ್ಪಣೆ ಮಾಡುತ್ತಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಜೆಡಿಎಸ್ ಕ್ಷೇತ್ರ ಘಟಕದ ಉಪಾಧ್ಯಕ್ಷ ಸತ್ಯನಾರಾಯಣ ಶ್ರೇಷ್ಠಿ ವಹಿಸಿದ್ದರು. ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಕೆ.ಎನ್.ಶಿವದಾಸ್, ಉಪೇಂದ್ರಗೌಡ, ಈ.ಸಿ.ಕ್ಸೇವಿಯಾರ್, ಪ್ರಭಾಕರ್, ಅಬ್ದುಲ್ ಸುಬಾನ್, ಮರುಳಪ್ಪ, ಎಂ.ಒ.ಜೋಯಿ, ಕೆ.ಟಿ.ಚಂದ್ರು, ಗಿಣಿಕಲ್ ಭರತ್, ಚಂದ್ರಶೇಖರ್, ಬಿ.ಟಿ.ರವಿ, ಎಂ.ಮಹೇಶ್, ವರ್ಕಾಟೆ ಸುಧಾಕರ್ ಇದ್ದರು. ಮಹಿಳೆಯರಿಗೆ ಬಾಗಿನ ರೂಪದಲ್ಲಿ ಸೀರೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.