ADVERTISEMENT

ಹಾಸ್ಟೆಲ್‌ ಶೌಚಾಲಯ ಸ್ವಚ್ಛಗೊಳಿಸಿದ ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 7:57 IST
Last Updated 3 ಅಕ್ಟೋಬರ್ 2021, 7:57 IST
ಚಿಕ್ಕಮಗಳೂರಿನ ರಾಮನಹಳ್ಳಿಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನ ಶೌಚಾಲಯವನ್ನು ಶಾಸಕ ಸಿ.ಟಿ.ರವಿ ಶನಿವಾರ ಸ್ವಚ್ಛಗೊಳಿಸಿದರು.
ಚಿಕ್ಕಮಗಳೂರಿನ ರಾಮನಹಳ್ಳಿಯ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ನ ಶೌಚಾಲಯವನ್ನು ಶಾಸಕ ಸಿ.ಟಿ.ರವಿ ಶನಿವಾರ ಸ್ವಚ್ಛಗೊಳಿಸಿದರು.   

ಚಿಕ್ಕಮಗಳೂರು: ‘ಎಲ್ಲರಲ್ಲೂ ಸ್ವಚ್ಛತೆಯ ಮನಸ್ಥಿತಿ ರೂಢಿಸಲು ಮಹಾತ್ಮ ಗಾಂಧಿ ಕಾಲದಿಂದಲೂ ಪ್ರಯತ್ನಗಳು ಸಾಗಿವೆ. ಆ ಪ್ರಯತ್ನಗಳು ಮತ್ತೊಬ್ಬರಿಗೆ ಪ್ರೇರಣೆ ನೀಡಿದರೆ ಮನಸ್ಥಿತಿ ಬದಲಾಗುತ್ತದೆ’ ಎಂದು ಶಾಸಕ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮನಸ್ಥಿತಿ ಬದಲಾಯಿಸದ ಹೊರತು ಪರಿಸ್ಥಿತಿ ಸುಧಾರಿಸಲು ಸಾಧ್ಯ ಇಲ್ಲ. ಇನ್ನೊಬ್ಬರಿಗೆ ಪ್ರೇರಣೆ ನೀಡುವ ದೃಷ್ಟಿಯಿಂದ ಹಾಸ್ಟೆಲ್‌ ಶೌಚಾಲಯ ಸ್ವಚ್ಛಗೊಳಿಸಿದ್ದೇನೆ’ ಎಂದರು.

‘ಕನ್ಹಯ್ಯ ಕುಮಾರ್‌ ಅವರು ತುಕ್ಡೆ ಗ್ಯಾಂಗ್‌ನ (ಕಾಂಗ್ರೆಸ್‌) ನಾಯಕ. ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಅವರು ಏನು ಮಾಡಲು ಸಾಧ್ಯವಿಲ್ಲ’ ಎಂದು ಉತ್ತರಿಸಿದರು.

ADVERTISEMENT

‘ಸರ್ಕಾರವು ಮತಾಂತರ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡರೆ ಅದನ್ನು ಸ್ವಾಗತಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.