ADVERTISEMENT

ಕಳಸ: ಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 4:05 IST
Last Updated 16 ಫೆಬ್ರುವರಿ 2026, 4:05 IST
ಕಳಸ ತಾಲ್ಲೂಕಿನ ಬಾಳೆಹೊಳೆ ಬಳಿ ಇಬ್ಬರು ಯುವಕರ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಹುಡುಕಾಟ ನಡೆಸಿದರು 
ಕಳಸ ತಾಲ್ಲೂಕಿನ ಬಾಳೆಹೊಳೆ ಬಳಿ ಇಬ್ಬರು ಯುವಕರ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಹುಡುಕಾಟ ನಡೆಸಿದರು    

ಕಳಸ: ಬಾಳೆಹೊಳೆ ಸಮೀಪದ ಭದ್ರಾ ನದಿಯಲ್ಲಿ ಶನಿವಾರ ಮುಳುಗಿದ್ದ ಇಬ್ಬರು ಯುವಕರ ಶವ ಭಾನುವಾರ ಸಿಕ್ಕಿದೆ.

ಬಾಳೆಹೊಳೆ ಸಮೀಪದ ಕಾಫಿ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಕ್ಕನ ಮನೆಗೆ ಕೊಡಗು ಜಿಲ್ಲೆಯಿಂದ ಅಭಿಷೇಕ್ (27) ಮತ್ತು ಯೋಗೀಶ್ (17) ಬಂದಿದ್ದರು.

ಶನಿವಾರ ತೋಟದ ಸಮೀಪದ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಈ ಯುವಕರು ನಾಪತ್ತೆಯಾಗಿದ್ದರು. ಶನಿವಾರ ಸಂಜೆವರೆಗೂ ಅಗ್ನಿಶಾಮಕ ದಳ ಮತ್ತು ಕಳಸ ಪೊಲೀಸರು ಹುಡುಕಾಟ ನಡೆಸಿದ್ದರೂ ಯುವಕರ ಶವ ಸಿಕ್ಕಿರಲಿಲ್ಲ.

ADVERTISEMENT

ಭಾನುವಾರ ಮಧ್ಯಾಹ್ನದ ವೇಳೆಗೆ ಶವ ಸಿಕ್ಕಿದ್ದು, ನದಿ ದಡದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಸ್ಥರಿಗೆ ನೀಡಲಾಯಿತು. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.