ಧರ್ಮಸ್ಥಳ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಿರುವ ಬೆಂಗಳೂರಿನ ಸಹೋದರರಿಬ್ಬರು ಸೋಮವಾರ ಕೊಟ್ಟಿಗೆಹಾರದಿಂದ ಯಾತ್ರೆ ಮುಂದುವರೆಸಿದರು
ಮೂಡಿಗೆರೆ: ಧರ್ಮಸ್ಥಳ ಕ್ಷೇತ್ರದ ವಿರುದ್ಧದ ತೇಜೋವಧೆಯನ್ನು ಖಂಡಿಸಿ ಬೆಂಗಳೂರಿನಿಂದ ಇಬ್ಬರು ಸಹೋದರರು ಪಾದಯಾತ್ರೆ ಕೈಗೊಂಡಿದ್ದು, ಸೋಮವಾರ ಕೊಟ್ಟಿಗೆಹಾರ ತಲುಪಿದರು.
ಬೆಂಗಳೂರಿನ ಜಾಲಹಳ್ಳಿಯವರಾದ ಹೇಮಂತ್ ಹಾಗೂ ಅನಿಲ್ ಪಾದಯಾತ್ರೆ ಕೈಗೊಂಡ ಸಹೋದರರು. ಭಾನುವಾರ ರಾತ್ರಿ ಕೊಟ್ಟಿಗೆಹಾರ ಪ್ರವೇಶಿಸಿದ ಇಬ್ಬರು ಅಲ್ಲಿಯೇ ತಂಗಿ, ಸೋಮವಾರ ಬೆಳಿಗ್ಗೆ ಸ್ಥಳೀಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಮುಂದುವರೆಸಿದರು. ಗ್ರಾಮಸ್ಥರು ಹಲವು ಸೇವೆಗಳನ್ನು ಒದಗಿಸಿ ಹರಸಿ ಬೀಳ್ಕೊಟ್ಟರು.
'ಧರ್ಮಸ್ಥಳ ನಮ್ಮ ಭಕ್ತಿಯ ಕೇಂದ್ರ. ಇಲ್ಲಿ ಎಲ್ಲರಿಗೂ ಸಮಾನವಾಗಿ ಸೇವೆ ದೊರೆಯುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ಧರ್ಮಸ್ಥಳ ಒಂದು ಮಾದರಿಯಾಗಿದ್ದು, ಧರ್ಮಸ್ಥಳ ವಿರುದ್ಧದ ಅಪಪ್ರಚಾರಕ್ಕೆ ತಕ್ಕ ಶಿಕ್ಷೆಯಾಗಲಿ ಎಂಬ ಸಂಕಲ್ಪ ಮಾಡಿ ಪಾದಯಾತ್ರೆ ನಡೆಸುತ್ತಿದ್ದೇವೆ' ಎಂದು ಹೇಮಂತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.