ADVERTISEMENT

ಓಲೈಕೆ ರಾಜಕಾರಣದ ವಿರುದ್ಧ ಬಿಎಸ್ಪಿ ಹೋರಾಟ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 13:16 IST
Last Updated 3 ಏಪ್ರಿಲ್ 2025, 13:16 IST
ಬಹುಜನ ಸಮಾಜ ಪಕ್ಷದ ಕಡೂರು ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಗುರುವಾರ ನಡೆಯಿತು. ಗಂಗಾಧರ ಬಹುಜನ ಮತ್ತಿತರರು ಇದ್ದರು.
ಬಹುಜನ ಸಮಾಜ ಪಕ್ಷದ ಕಡೂರು ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಗುರುವಾರ ನಡೆಯಿತು. ಗಂಗಾಧರ ಬಹುಜನ ಮತ್ತಿತರರು ಇದ್ದರು.   

ಕಡೂರು: ‘ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಹೊಂದಾಣಿಕೆ ನೀತಿಯಿಂದ ಜನರ ಕಣ್ಣಿಗೆ ಮಣ್ಣೆರಚುತ್ತಿವೆ. ಈ ಓಲೈಕೆ ರಾಜಕಾರಣದ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ಒದಗಿಸುವ ಧ್ಯೇಯ ಬಹುಜನ‌ ಸಮಾಜ‌ ಪಕ್ಷದ್ದು’ ಎಂದು ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ ಬಹುಜನ ಹೇಳಿದರು.

ಕಡೂರಿನಲ್ಲಿ ಗುರುವಾರ ಬಿಎಸ್‌ಪಿ ಪಕ್ಷದ ತಾಲ್ಲೂಕು ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರ ಉಳ್ಳವರ ಪರವಾಗಿ ನೀತಿಗಳನ್ನು ರೂಪಿಸುತ್ತಿವೆ. ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ.  ಬಹುಜನ ಸಮಾಜ ಪಕ್ಷದ ಆಶಯವೇ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು. ಈಗಿರುವ ರಾಜಕೀಯ ಪಕ್ಷಗಳಿಂದ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಪರ್ಯಾಯ ಪಕ್ಷವಾಗಿ ಬಿಎಸ್‌ಪಿ ದೇಶದ ಆಶಾಕಿರಣವಾಗಿದೆ’ ಎಂದರು.

ADVERTISEMENT

ರಾಜ್ಯ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ, ‘ ಸಂವಿಧಾನವನ್ನು ಆಳುವ ಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸಾಮಾಜಿಕ- ಆರ್ಥಿಕ ಪರಿಸ್ಥಿತಿ ಆಧಾರದಲ್ಲಿ ಮೀಸಲಾತಿ, ಒಳ ಮೀಸಲಾತಿ ಜಾರಿಯಾಗಬೇಕು ಎಂಬ ಧ್ಯೇಯದೊಂದಿಗೆ ಬಿಎಸ್‌ಪಿ’ ಕಾರ್ಯನಿರ್ವಹಿಸುತ್ತಿದೆ ಎಂದರು.

ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎನ್.ಜಿ. ಕೊಪ್ಪಲು ಚಂದ್ರಶೇಖರನಾಯ್ಕ,ತಾಲ್ಲೂಕು ಸಂಚಾಲಕರಾಗಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಘಟಕದ ಉಪಾಧ್ಯಕ್ಷ ಝಾಕೀರ್ ಹುಸೇನ್, ಹಾಸನ ಉಸ್ತುವಾರಿ ಕೆ.ಪಿ‌ ಮಲ್ಲಯ್ಯ, ರಾಜ್ಯ ಘಟಕದ ಕಾರ್ಯದರ್ಶಿ ಸುಧಾ, ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ಕಾರ್ಯದರ್ಶಿ ಪಿ.ಎಂ. ನಾರಾಯಣ ಮೂರ್ತಿ, ಬಿದರಿಕೆರೆ ಶ್ರೀನಿವಾಸ್, ಬಿ.ಈಶ್ವರಪ್ಪ, ಗಂಗಾಧರ್, ವೇಲಾಯುಧನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.