ADVERTISEMENT

ಚಿಕ್ಕಮಗಳೂರು: ಹೂಡಿಕೆ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 20 ಮೇ 2025, 13:45 IST
Last Updated 20 ಮೇ 2025, 13:45 IST
ಸುಬ್ರಹ್ಮಣ್ಯ ಬಸವನಹಳ್ಳಿ
ಸುಬ್ರಹ್ಮಣ್ಯ ಬಸವನಹಳ್ಳಿ   

ಚಿಕ್ಕಮಗಳೂರು: ನಗರದ ಚಿಕ್ಕಮಗಳೂರು ಕ್ಲಬ್‌ನಲ್ಲಿ ಹೂಡಿಕೆ ತಂತ್ರಗಳ ಮೇಲೆ ವಿಶೇಷ ಕಾರ್ಯಕ್ರಮವನ್ನು  ಮೇ 21 ರಂದು ಬೆಳಿಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಬುಲ್‌ ಫೋರ್ಟ್‌ ಸಂಸ್ಥಾಪಕ ಸುಬ್ರಹ್ಮಣ್ಯ ಬಸವನಹಳ್ಳಿ ಹೇಳಿದರು.

ಹೊಸ ಹೂಡಿಕೆದಾರರಿಗೆ ಕಾರ್ಯಕ್ರಮದಲ್ಲಿ ಅನುಭವಿಗಳಿಂದ ಮಾರ್ಗದರ್ಶನ ಲಭಿಸಲಿದೆ. ಹೂಡಿಕೆ ತಜ್ಞರೊಂದಿಗೆ ಸಂವಾದ ನಡೆಸುವ, ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅವಕಾಶವೂ ಇದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಗಾರದಲ್ಲಿ ಷೇರು ಮಾರುಕಟ್ಟೆ ತಜ್ಞರಾದ ಆನಂದ್ ಶೆಯೋನ್ ಹಾಗೂ ವಿಷಾಲ್ ಗುಪ್ತಾ, ಎಸ್‌ಇಬಿಐ ಸ್ಮಾರ್ಟ್‌ ತರಬೇತಿದಾರರಾದ ದೀಪಕ್ ವೆಕಾರಿಯಾ ಭಾಗವಹಿಸಿವರು ಎಂದರು.  ಸುದ್ದಿಗೋಷ್ಠಿಯಲ್ಲಿ ಬುಲ್‌ಫೋರ್ಟ್‌ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ವಿಕ್ರಂ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.