ADVERTISEMENT

ಸುದೀಪ್‌ ವಿರುದ್ಧದ ಅರ್ಜಿ ವಜಾ

ಧಾರವಾಹಿ ಚಿತ್ರೀಕರಣ–ಬಾಡಿಗೆ ಪಾವತಿಸದೆ ವಂಚನೆ: ದೂರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 13:50 IST
Last Updated 15 ಫೆಬ್ರುವರಿ 2020, 13:50 IST

ಚಿಕ್ಕಮಗಳೂರು: ‘ನಟ ಸುದೀಪ್‌ ಒಡೆತನದ ಕಿಚ್ಚ ಕ್ರಿಯೇಷನ್ಸ್‌ ‘ವಾರಸ್ದಾರ’ ಧಾರವಾಹಿ ಚಿತ್ರೀಕರಣಕ್ಕಾಗಿ ಎಸ್ಟೇಟ್‌ ಬಳಸಿಕೊಂಡು ಬಾಡಿಗೆ ಪಾವತಿಸದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಬೈಗೂರಿನ ದೊಡ್ಮನೆ ಎಸ್ಟೇಟ್‌ನ ದೀಪಕ್‌ ಮಯೂರ್‌ ಪಟೇಲ್ ದಾಖಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾ ಮಾಡಿದೆ’ ಎಂದು ಸುದೀಪ್‌ ಅವರ ವಕೀಲ ಎ.ಗೋಪಿಪ್ರಕಾಶ್‌ ತಿಳಿಸಿದರು

‘ದೀಪಕ್‌ ಮಯೂರ್‌ ಪಟೇಲ್ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ‘ಬಿ’ ರಿಪೋರ್ಟ್‌ (ಆರೋಪ ಸಾಬೀತಾಗಿಲ್ಲ) ಹಾಕಿದ್ದರು. ‘ಬಿ’ ರಿಪೋರ್ಟ್‌ಅನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ದೂರಿನಲ್ಲಿ ಹುರುಳಿಲ್ಲ ಎಂದು ಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಧಾರವಾಹಿ ಚಿತ್ರೀಕರಣಕ್ಕಾಗಿ ದೊಡ್ಮನೆ ಎಸ್ಟೇಟ್‌ಅನ್ನು ಸುಮಾರು 30 ದಿನ ಬಳಸಿಕೊಳ್ಳಲಾಗಿದೆ. ಮಾತುಕತೆಯಂತೆ ಹಣ ನೀಡಲಾಗಿದೆ. ದೀಪಕ್‌ ಅವರು ಮಾಡಿದ್ದ ಆರೋಪದಲ್ಲಿ ಹುರುಳಿಲ್ಲ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.