ADVERTISEMENT

ಮನೆಯಂಗಳದಲ್ಲಿ ಶ್ರಾವಣ ಸಂಜೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 1:55 IST
Last Updated 2 ಆಗಸ್ಟ್ 2022, 1:55 IST
ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಆಲ್ದೂರು ಹೋಬಳಿ ಘಟಕದ ವತಿಯಿಂದ ಮನೆಯಂಗಳದಲ್ಲಿ ಶ್ರಾವಣ ಸಂಜೆ ಸಾಹಿತ್ಯ ಸುಧೆ ಕಾರ್ಯಕ್ರಮ ನಡೆಯಿತು.
ಶನಿವಾರ ಕನ್ನಡ ಸಾಹಿತ್ಯ ಪರಿಷತ್ತು ಆಲ್ದೂರು ಹೋಬಳಿ ಘಟಕದ ವತಿಯಿಂದ ಮನೆಯಂಗಳದಲ್ಲಿ ಶ್ರಾವಣ ಸಂಜೆ ಸಾಹಿತ್ಯ ಸುಧೆ ಕಾರ್ಯಕ್ರಮ ನಡೆಯಿತು.   

ಆಲ್ದೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಮನೆಯಂಗಳದಲ್ಲಿ ಶ್ರಾವಣ ಸಂಜೆ ಸಾಹಿತ್ಯ ಸುಧೆ ಕಾರ್ಯಕ್ರಮ ಶನಿವಾರ ನಡೆಯಿತು.

ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಚ್.ಜೆ. ನೂರ್ ಮಹಮ್ಮದ್ ಮಾತನಾಡಿ, ಸಾಮಾಜಿಕ ಪರಿವರ್ತನೆಯಲ್ಲಿ ಸಾಹಿತ್ಯದ ಬೆಳವಣಿಗೆ ಕುರಿತು ತಿಳಿಸಿಕೊಟ್ಟರು.

ಉದ್ಘಾಟಿಸಿದ ಗ್ರಾಮ ಪಂಚಾಯಿತಿ ಸದಸ್ಯ ಎಚ್.ನವರಾಜು ಮಾತನಾಡಿ, ‘ಸಾಹಿತ್ಯದ ಮೂಲಕ ಹಲವು ವ್ಯಕ್ತಿತ್ವಗಳು ಸಮಾಜದಲ್ಲಿ ಸೈದ್ಧಾಂತಿಕವಾಗಿಯೂ ಪರಿವರ್ತನೆಯನ್ನು ತಂದಿವೆ. ಅದರಲ್ಲಿ ಕಾರ್ಲ್ ಮಾರ್ಕ್ಸ್ ಚಿಂತನೆಗಳು ಹೊಸ ಆಡಳಿತ ವ್ಯವಸ್ಥೆಗೆ ಬುನಾದಿಯಾದವು‘ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ವನಮಾಲಾ ಮೃತ್ಯುಂಜಯ ಮಾತನಾಡಿ, ‘ವ್ಯಕ್ತಿ ಹಾಗೂ ವ್ಯಕ್ತಿತ್ವಗಳಲ್ಲಿ ಪರಿವರ್ತನೆಯನ್ನು ಕಾಣುವ ಪ್ರಯತ್ನವನ್ನು ಮಾಡಬೇಕು. ನಾವು ಯಾವ ವ್ಯಕ್ತಿಯೊಂದಿಗೆ ಒಡನಾಟವನ್ನು ಇಟ್ಟುಕೊಳ್ಳುತ್ತೇವೆ. ಅವುಗಳು ನಮ್ಮ ವಿಚಾರಧಾರೆಯನ್ನು ಬೆಳವಣಿಗೆಯ ಸಂಕೇತವಾಗಿ ಪ್ರತಿಬಿಂಬಿಸುತ್ತವೆ’ ಎಂದರು.

ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೃಥ್ವಿ ಸಂತೋಷ್, ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯೆ ಪ್ರತಿಭಾ ನವೀನ್, ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾಹಿರಾಬಾನು, ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ರವಿಕುಮಾರ್ ಎಚ್.ಎಲ್., ಎಚ್.ಆರ್. ಅಣ್ಣೇಗೌಡ, ಗೋಪಾಲ್ ಗೌಡ ಹಳಿಯೂರು, ಹಾಂದಿ ರಮೇಶ್, ಪ್ರವೀಣ್, ನಿಂಗಪ್ಪ, ಹೇಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.