ADVERTISEMENT

ಚಿಕ್ಕಮಗಳೂರು | ಬಾಲಕಿ ಅಪಹರಣ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 7:12 IST
Last Updated 30 ಡಿಸೆಂಬರ್ 2025, 7:12 IST
 ಬಾಲಕಿ ಅಪಹರಣ ಪ್ರಕರಣದಲ್ಲಿ ಯಗಟಿ ಪೊಲೀಸರು ವಶಕ್ಕೆ ಪಡೆದಿರುವ ರಂಗಸ್ವಾಮಿ
 ಬಾಲಕಿ ಅಪಹರಣ ಪ್ರಕರಣದಲ್ಲಿ ಯಗಟಿ ಪೊಲೀಸರು ವಶಕ್ಕೆ ಪಡೆದಿರುವ ರಂಗಸ್ವಾಮಿ   

ಕಡೂರು: ನಾಲ್ಕೂವರೆ ವರ್ಷ ವಯಸ್ಸಿನ ಬಾಲಕಿಯನ್ನು ಅಪಹರಿಸಿದ್ದ ವ್ಯಕ್ತಿಯನ್ನು ಯಗಟಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಪೋಕ್ಸೊ ಅನ್ವಯ ಪ್ರಕರಣ ದಾಖಲಿಸಿದ್ದಾರೆ.

ಪಕ್ಕದ ಮನೆಯಲ್ಲಿ ಬಾಲಕಿ ಬಿಟ್ಟು ದಂಪತಿ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ ಮರಳಿದಾಗ ಇರಲಿಲ್ಲ. ತುಮಕೂರು ಜಿಲ್ಲೆ ಶಿರಾದ ರಂಗಸ್ವಾಮಿ ಹೆಸರಿನ ಕುರಿಗಾಹಿ ಕರೆದೊಯ್ದಿದ್ದನ್ನು ನೋಡಿದ್ದಾಗಿ ಕೆಲವರು ತಿಳಿಸಿದರು.

ಹುಡುಕಾಡಿದಾಗ ಪಕ್ಕದ ಊರಿನ ದೇವಸ್ಥಾನ ಸಮೀಪದ ಪಾಳು ಮನೆಯಲ್ಲಿ ಬಾಲಕಿ ಜತೆ ಆರೋಪಿ ಇದ್ದುದು ಪತ್ತೆ ಆಯಿತು. ಬಾಲಕಿ ವಶಕ್ಕೆ ಪಡೆದ ಪೊಲೀಸರು, ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆ ಮಾಡಿಸಿದರು. 

ADVERTISEMENT

ಸೋಮವಾರ ಚಿಕ್ಕಮಗಳೂರಿನ ಸಖಿ ಆಪ್ತಸಮಾಲೋಚನಾ ಕೇಂದ್ರಕ್ಕೆ ಕಳುಹಿಸಿ ತಪಾಸಣೆ ನಡೆಸಿದರು. ವರದಿ ಬಂದ ಬಳಿಕ ರಂಗಸ್ವಾಮಿ ವಿರುದ್ಧ ಪೋಕ್ಸೊ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.