ADVERTISEMENT

ಚಿಕ್ಕಮಗಳೂರು: ಮಹಿಳೆಗೆ ಕಿರುಕುಳ; ಕಾಂಗ್ರೆಸ್ ಮುಖಂಡನ ಬಂಧನ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 9:15 IST
Last Updated 29 ಅಕ್ಟೋಬರ್ 2025, 9:15 IST
   

ಚಿಕ್ಕಮಗಳೂರು: ಮಹಿಳೆಯೊಬ್ಬರ ವೈಯಕ್ತಿಕ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ, ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

'ಶ್ರೀನಿವಾಸನಗರದ ಆದಿತ್ಯ(40) ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ನಂತರ ವೈಯಕ್ತಿಕ ಫೋಟೋಗಳನ್ನು ಪಡೆದು ಅವುಗಳನ್ನು ಎಡಿಟ್ ಮಾಡಿ ಸ್ನೇಹಿತರಿಗೆ ತೋರಿಸುತ್ತಿದ್ದ. ಅಲ್ಲದೇ ಜೀವ ಬೆದರಿಕೆ ಹಾಕಿದ್ದ' ಎಂದು ಪೊಲೀರಿಗೆ‌ ಮಹಿಳೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು, ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ.

ADVERTISEMENT

ಆದಿತ್ಯ ಈ ಹಿಂದೆ ಯುವ ಕಾಂಗ್ರೆಸ್ ಆಲ್ದೂರು ಘಟಕದ ಉಪಾಧ್ಯಕ್ಷನಾಗಿದ್ದರು. ಬಂಧನಕ್ಕೂ ಮುನ್ನ ಆದಿತ್ಯ ಮನೆಗೆ ಹೋಗಿ ಕಾಂಗ್ರೆಸ್ ಕಾರ್ಯಕರ್ತರೇ ಥಳಿಸಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.