ADVERTISEMENT

ಆತ್ಮಹತ್ಯೆ ಮಾಡಿಕೊಂಡ ಸಂತೋಷ್‌ ಕಾಫಿನಾಡಿನ ಹೋಂ ಸ್ಟೇನಲ್ಲಿ 3 ದಿನ ತಂಗಿದ್ದರು

ಹೋಂ ಸ್ಟೇಗೆ ತನಿಖಾ ತಂಡ ಭೇಟಿ; ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 2:08 IST
Last Updated 17 ಏಪ್ರಿಲ್ 2022, 2:08 IST
ಗುತ್ತಿಗೆದಾರ ಸಂತೋಷ್ ಪಾಟೀಲ್‌
ಗುತ್ತಿಗೆದಾರ ಸಂತೋಷ್ ಪಾಟೀಲ್‌   

ಚಿಕ್ಕಮಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್‌ ತನಿಖಾ ತಂಡವು ಚಿಕ್ಕಮಗಳೂರಿನ ಕೈಮರ ಸಮೀಪದ ಬಾನ್‌ ಆಫ್‌ ಬೆರ್ರಿ ಹೋಂ ಸ್ಟೇನಲ್ಲಿ ಶನಿವಾರ ಪರಿಶೀಲನೆ ನಡೆಸಿದ್ದಾರೆ.

ತನಿಖಾ ತಂಡದವರು ಹೋಂ ಸ್ಟೇ ನೌಕರರಿಂದ ಮಾಹಿತಿ ಕಲೆ ಹಾಕಿದ್ದಾರೆ. ಯಾವ್ಯಾವ ತಾಣಗಳಿಗೆ ಭೇಟಿ ನೀಡಿದ್ದರು ಎಂಬ ವಿವರ ಪಡೆದಿದ್ದಾರೆ.

‘ಸಂತೋಷ್‌ ಅವರು ಎಷ್ಟು ದಿನ ತಂಗಿದ್ದರು ಮತ್ತು ಅವರ ಚಲನವಲನಗಳ ಕುರಿತು ಪೊಲೀಸರು ಮಾಹಿತಿ ಪಡೆದುಕೊಂಡರು. ಸಂತೋಷ್‌ ಜೊತೆ ತಂಗಿದ್ದ ಒಬ್ಬರನ್ನು ಕರೆ ತಂದಿದ್ದರು’ ಎಂದು ಹೋಂ ಸ್ಟೇ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಂತೋಷ್‌ ಅವರು ಗೆಳೆಯರೊಂದಿಗೆ ಏ. 8, 9 ಹಾಗೂ 10 ರಂದು ತಂಗಿದ್ದರು 11ರಂದು ಉಡುಪಿಗೆ ತೆರಳಿದ್ದರು ತಿಳಿದು ಬಂದಿದೆ.

ಸಂತೋಷ್‌ ಅವರು ಕೆ.ಎಸ್‌.ಈಶ್ವರಪ್ಪ ವಿರುದ್ಧ ಶೇ 40 ಕಮಿಷನ್ ಆರೋಪ ಮಾಡಿದ್ದರು. ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.