ADVERTISEMENT

30ಮಂದಿಗೆ ದೃಢ; 22 ಮಂದಿ ಗುಣಮುಖ

ಕೋವಿಡ್‌: ಕಾಫಿನಾಡಿನಲ್ಲಿ ಸಕ್ರಿಯ ಪ್ರಕರಣಗಳು 68

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:39 IST
Last Updated 16 ಜುಲೈ 2020, 16:39 IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಗುರುವಾರ 30 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗುಣಮುಖರಾಗಿ 22 ಮಂದಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಲ್ಲೂಕುವಾರು ಚಿಕ್ಕಮಗಳೂರು–14, ಕಡೂರು– –7, ತರೀಕೆರೆ ಮತ್ತು ಕೊಪ್ಪ ತಲಾ ಮೂರು, ಮೂಡಿಗೆರೆ– 2 ಹಾಗೂ ಅಜ್ಜಂಪುರ– ಒಬ್ಬರಿಗೆ ದೃಢಪಟ್ಟಿದೆ.

ಚಿಕ್ಕಮಗಳೂರಿನ ಮಾರುಕಟ್ಟೆ ರಸ್ತೆಯ16 ವರ್ಷ ಪುರುಷ, ನೇಕಾರ ಬೀದಿಯ 39 ವರ್ಷದ ಮಹಿಳೆ, ದರ್ಜಿ ಬೀದಿಯ 53 ವರ್ಷದ ಪುರುಷ, ನಗರಕ್ಕೆ ಬೆಂಗಳೂರಿನಿಂದ ಬಂದಿದ್ದ 36 ವರ್ಷದ ಪುರುಷ, 28 ವರ್ಷದ ಮಹಿಳೆ , 60 ವರ್ಷದ ಮಹಿಳೆ, ಕೆಂಪನಹಳ್ಳಿಯ 47 ವರ್ಷದ ಪುರುಷ, ಮುಗಳವಳ್ಳಿಯ 55 ವರ್ಷದ ಪುರುಷ, ಲಕ್ಯಾದ 32 ವರ್ಷದ ಪುರುಷ, ಕಳಸಾಪುರದ 40 ವರ್ಷದ ಪುರುಷ, ತಾಲ್ಲೂಕಿನ 30 ವರ್ಷದ ಪುರುಷ, 7ವರ್ಷದ ಪುರುಷ, 37 ವರ್ಷದ ಪುರುಷ, 55 ವರ್ಷದ ಪುರುಷ, ತರೀಕೆರೆ ತಾಲ್ಲೂಕಿನ ಬಾವಿಕೆರೆಯ 60 ವರ್ಷದ ಮಹಿಳೆ, 42 ವರ್ಷದ ಪುರುಷ, ಕರಕುಚ್ಚಿ ಎ ಕಾಲೊನಿಯ 27 ವರ್ಷದ ಪುರುಷ, ಅಜ್ಜಂಪುರದ ಶಾರದಾವಿಲಾಸ ರಸ್ತೆಯ 40 ವರ್ಷದ ಮಹಿಳೆ, ಕೊಪ್ಪದ ಕೆಸವೆ ರಸ್ತೆಯ 50 ವರ್ಷದ ಪುರುಷ, ಸುಭಾಷ್‌ ರಸ್ತೆಯ 65 ವರ್ಷದ ಮಹಿಳೆ, ಜಯಪುರ ಜಲದುರ್ಗದ 31 ವರ್ಷದ ಪುರುಷ, ಕಡೂರಿನ ವೇದಾನಗರದ 20 ವರ್ಷದ ಪುರುಷ, 17 ವರ್ಷದ ಮಹಿಳೆ, 52 ವರ್ಷದ ಪುರುಷ, ಮೊದಲಿಯಾರ್‌ ಕಾಲೊನಿಯ 54 ವರ್ಷದ ಪುರುಷ, 18 ವರ್ಷದ ಪುರುಷ, 40 ವರ್ಷದ ಮಹಿಳೆ, ಬೀರೂರಿನ ಹಳೆಪೇಟೆಯ 25 ವರ್ಷದ ಮಹಿಳೆ, ಮೂಡಿಗೆರೆ ತಾಲ್ಲೂಕಿನ 26 ವರ್ಷದ ಪುರುಷಗೆ ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ 68 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳು ಸಂಖ್ಯೆ 198ಕ್ಕೆ ತಲುಪಿದೆ.

619 ಮಂದಿ ಮಾದರಿ ಸಂಗ್ರಹ

ಕೊರೊನಾ ವೈರಾಣು ಸೋಂಕು ಪರೀಕ್ಷೆ ನಿಟ್ಟಿನಲ್ಲಿ ಶುಕ್ರವಾರ 619 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿಯನ್ನು ಸಂಗ್ರಹಲಾಗಿದೆ.

448 ಮಂದಿಯ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ಪತ್ತೆಯಾಗಿಲ್ಲ. 2631 ಮಂದಿಯ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 597ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.