ADVERTISEMENT

ನಾಲ್ವರು ಪೊಲೀಸ್‌ ಸಹಿತ 8 ಮಂದಿಗೆ ಕೋವಿಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 3:51 IST
Last Updated 21 ಜೂನ್ 2020, 3:51 IST
   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ತರೀಕೆರೆಯ ನಾಲ್ವರು ಪೊಲೀಸರು ಸಹಿತ ಎಂಟು ಮಂದಿಗೆ ಶನಿವಾರ ಕೋವಿಡ್‌ ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 16ಕ್ಕೆ ಏರಿದೆ.

ಕುವೈತ್‌ನಿಂದ ಶೃಂಗೇರಿ ತಾಲ್ಲೂಕಿಗೆ ಬಂದಿದ್ದ ಗರ್ಭಿಣಿ (ಪಿ–8320), ತರೀಕೆರೆಯ ಪೊಲೀಸರಾದ 38 ವರ್ಷದ ಪುರುಷ (ಪಿ–8321), 54 ವರ್ಷದ ಪುರುಷ (ಪಿ–8322), 31 ವರ್ಷದ ಪುರುಷ (ಪಿ–8323), 47 ವರ್ಷದ ಪುರುಷ (ಪಿ–8324), ಮಹಾರಾಷ್ಟ್ರದಿಂದ ಎನ್‌.ಆರ್‌.ಪುರ ತಾಲ್ಲೂಕಿಗೆ ಬಂದಿದ್ದ18 ವರ್ಷದ ಪುರುಷ (ಪಿ–8325), 50 ವರ್ಷದ ಪುರುಷ (ಪಿ–8326) ಹಾಗೂ ತಮಿಳುನಾಡಿನಿಂದ ಕೊಪ್ಪ ತಾಲ್ಲೂಕಿಗೆ ಬಂದಿದ್ದ 25 ವರ್ಷದ ಪುರುಷಗೆ(ಪಿ–8326) ಸೋಂಕು ಪತ್ತೆಯಾಗಿದೆ. ಇವೆರಲ್ಲರನ್ನು ಚಿಕ್ಕಮಗಳೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ತಿಳಿಸಿದ್ದಾರೆ.

ಪ್ರಾಥಮಿಕ ಸಂಪರ್ಕದಲ್ಲಿದ್ದರ ಮಾಹಿತಿ ಪತ್ತೆ ಕಲೆ ಹಾಕುವ ಕೆಲಸ ಪ್ರಗತಿಯಲ್ಲಿದೆ. ನಾಲ್ವರು ಪೊಲೀಸರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಮಾಹಿತಿ ಕಲೆ ಹಾಕಿದ್ದೇವೆ. ಪ್ರಕ್ರಿಯೆ ಮುಂದುವರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ಶುಕ್ರವಾರ ಕೋವಿಡ್‌ ದೃಢಪಟ್ಟಿದ್ದ ಕಾರಾಗೃಹದ ವಿಚಾರಣಾಧಿನ ಕೈದಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 44 ಮಂದಿಯನ್ನು ಜೈಲಿನಲ್ಲೇ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇವರೆಲ್ಲರ ಗಂಟಲದ್ರವ, ಮೂಗಿನ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.