ADVERTISEMENT

ಅಸುರ ದಹನ: ನವರಾತ್ರಿ ಉತ್ಸವಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:14 IST
Last Updated 7 ಅಕ್ಟೋಬರ್ 2022, 6:14 IST
ನವರಾತ್ರಿ ಆಚರಣೆಯ ಅಸುರ ದಹನಕ್ಕಾಗಿ ಪ್ರತಿಷ್ಠಾಪಿಸಿದ್ದ ಅಸುರ ಪ್ರತಿಕೃತಿ
ನವರಾತ್ರಿ ಆಚರಣೆಯ ಅಸುರ ದಹನಕ್ಕಾಗಿ ಪ್ರತಿಷ್ಠಾಪಿಸಿದ್ದ ಅಸುರ ಪ್ರತಿಕೃತಿ   

ಮೂಡಿಗೆರೆ: ಪಟ್ಟಣದ ಕೆ.ಎಂ. ರಸ್ತೆಯಲ್ಲಿರುವ ಹಿರೇ ದೇವಿರಮ್ಮನ ಬನದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಶ್ರೀದುರ್ಗಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ದುರ್ಗಾಮಾತೆ ವಿಸರ್ಜನೆಯೊಂದಿಗೆ ನವರಾತ್ರಿ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಅಲಂಕಾರಗೊಂಡ ಮಂಟಪದಲ್ಲಿ ದುರ್ಗಾದೇವಿಯನ್ನು ಕುಳ್ಳಿರಿಸಿ ವಾದ್ಯಗೋಷ್ಠಿಗಳೊಂದಿಗೆ ಬಿಳಗುಳ, ಕೆ.ಎಂ ರಸ್ತೆ, ಶೆಟ್ರುಬೀದಿ, ಎಂ.ಜಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿ 9ರ ಸುಮಾರಿಗೆ ದೇವಿಯನ್ನು ಲಯನ್ಸ್ ವೃತ್ತಕ್ಕೆ ಮೆರವಣಿಗೆಯೊಂದಿಗೆ ತಂದು ಅಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಸುರನ ಮುಂದೆ ದೇವಿಯನ್ನು ನಿಲ್ಲಿಸಿ, ಪಟಾಕಿ, ಸಿಡಿಮದ್ದುಗಳನ್ನು ಸುಟ್ಟು, ಅಸುರ ದಹನ ನಡೆಸಲಾಯಿತು. ಅಸುರ ದಹನದ ಬಳಿಕ ಜನರು ಕುಣಿದು ಸಂಭ್ರಮಿಸಿದರು. ನಡುರಾತ್ರಿಯ ಬಳಿಕ ಸುಂಡೇಕೆರೆ ಹಳ್ಳದಲ್ಲಿ ದೇವಿಯ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಶ್ರೀದುರ್ಗಾದೇವಿ ಸಮಿತಿ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT