ಶೃಂಗೇರಿ: ‘ಮಲೆನಾಡಿನ ತೋಟ, ಗದ್ದೆಗೆ ಗೊಬ್ಬರ, ತೋಟದಿಂದ ತರುವ ಅಡಿಕೆ, ಕಾಫಿ, ಕಾಳು ಮೆಣಸು ಮತ್ತಿತರ ಬೆಳೆಯನ್ನು ತೋಟದಿಂದ ಸಾಗಿಸಲು ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಯಂತ್ರ ಆವಿಷ್ಕರಿಸಲಾಗಿದೆ. ಇದು ರಿಮೋಟ್‍ನಿಂದ ನಿಯಂತ್ರಿಸಲಾಗಿದ್ದು, ಅಪಘಾತ ಮತ್ತು ಸೋಂಕಿನಿಂದ ಸುತಕ್ಷಿತವಾಗಿದೆ’ ಎಂದು ಉದ್ಯಮಿ ಎಸ್.ಕೆ.ಮಿಥುನ್ ಹೇಳಿದರು.
ಪಟ್ಟಣದ ಮಾನಗಾರಿನ ಹೊಸಮನೆ ತ್ಯಾಗರಾಜ ರಾವ್ ತೋಟದಲ್ಲಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಬುಧವಾರ ಆಯೋಜಿಸಿದ್ದ ಬ್ಯಾಟರಿ ಚಾಲಿತ, ರಿಮೋಟ್ ನಿಯಂತ್ರಿತ ಯಂತ್ರದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.
500 ಕೆ.ಜಿ ಭಾರ ಹೊರುವ ಸಾಮರ್ಥ್ಯವಿರುವ ಈ ಯಂತ್ರ ಫೋರ್ ವ್ಹೀಲ್ ಚಲನೆ ಹೊಂದಿದೆ. ಇದು ಕೆಸರು, ಜಾರಿಕೆ, ಗುಡ್ಡಗಾಡು ಪ್ರದೇಶದಲ್ಲೂ ಸಮರ್ಥವಾಗಿ ನಿರ್ವಹಿಸಬಹುದಾಗಿದೆ ಎಂದರು.
ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ರಾವ್ ಮಾತನಾಡಿ, ರೈತರು ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಸಾಕಷ್ಟು ಯಂತ್ರೋಪಕರಣದ ಪರಿಚಯವಾಗಿದೆ. ಪವರ್ ಟಿಲ್ಲರ್, ಟ್ರಾಕ್ಟರ್ ಮಾಡುವ ಕೆಲಸವನ್ನು ಈ ಯಂತ್ರ ಮಾಡುತ್ತದೆ ಎಂದರು.
ಪ್ರಾತ್ಯಕ್ಷಿಕೆಯಲ್ಲಿ ರೈತ ಮುಖಂಡರಾದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಡಿ.ಸಿ.ಶಂಕರಪ್ಪ, ಕಲ್ಕುಳಿ ಚಂದ್ರಶೇಖರ ಹೆಗ್ಡೆ, ಪ್ರವೀಣ್, ಶ್ರೇಯಸ್, ಟಿ.ಕೆ ಪರಾಶರ, ಸತೀಶ್, ಸೀತಾರಾಮ, ತೋಟದ ಕುಂಬ್ರಿ ಸತೀಶ್, ಅವಿನಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.