ತರೀಕೆರೆ: ಶಿವಮೊಗ್ಗ ನಗರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ನಂದಿಬಟ್ಟಲು ಗ್ರಾಮದ ಎನ್.ಎಸ್. ದೇವ್ಲಾನಾಯ್ಕ ಪ್ರಥಮ ಸ್ಥಾನ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ನಂದಿಬಟ್ಟಲು ಗ್ರಾ.ಪಂ. ಅಧ್ಯಕ್ಷ ಎನ್.ಜೆ. ಭದ್ರೇಗೌಡ ಮತ್ತು ಸದಸ್ಯ ಎನ್.ಎ. ಕೃಷ್ಣನಾಯ್ಕ ತಿಳಿಸಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ದೊಡ್ಡ ಮುತ್ತಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಂದಿಬಟ್ಟಲು ತಾಂಡ್ಯದಲ್ಲಿ ಜನಿಸಿ, ಶಿಕ್ಷಕ ವೃತ್ತಿ ಮಾಡುತ್ತಾ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿರುವ ದೇವ್ಲಾನಾಯ್ಕ ಅವರ ಸಾಧನೆ ಎಲ್ಲರಿಗೂ ಮಾದರಿ. ರಾಷ್ಟ್ರಮಟ್ಟದ ಸರ್ಕಾರಿ ನೌಕರರ ಕುಸ್ತಿ ಸ್ಪರ್ಧೆಯಲ್ಲೂ ಅವರು, ಗೆಲುವು ಸಾಧಿಸಲಿ ಎಂದು ನಂದಿಬಟ್ಟಲು ಹಾಗೂ ತಿಗಡ ಗ್ರಾ.ಪಂ. ಜನಪ್ರತಿನಿಧಿಗಳು, ಗ್ರಾಮಸ್ಥರು ಮತ್ತು ದೇವ್ಲಾನಾಯ್ಕರ ತಾಯಿ ಭೀಮಣಿಬಾಯಿ, ಸಹೋದರರು, ಶಿಕ್ಷಕ ಎನ್.ಎಸ್. ನಾಗರಾಜನಾಯ್ಕ ಶುಭ ಹಾರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.