ನರಸಿಂಹರಾಜಪುರ: ‘ಸರ್ಕಾರ ನೀಡುವ ಸಾಧನ, ಸಲಕರಣೆಗಳನ್ನು ಬಳಸಿಕೊಂಡು ಅಂಗವಿಕಲ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಸೇವ್ಯಾನಾಯಕ್ ಹೇಳಿದರು.
ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ವೈದ್ಯಕೀಯ ಮೌಲ್ಯಾಂಕನ ಆಧಾರದ ಮೇಲೆ ಶಿಕ್ಷಣ ಇಲಾಖೆ, ಅಲಿಂಕೊ ಸಂಸ್ಥೆಯ ಆಶ್ರಯದಲ್ಲಿ ತಾಲ್ಲೂಕಿನ ಅಂಗವಿಕಲ ಮಕ್ಕಳಿಗೆ ಸಾಧನ–ಸಲಕರಣೆ ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಿಜಿಯೋ ಥೆರೆಪಿಸ್ಟ್ ನಿಖಿಲ್ ಮಾತನಾಡಿ, ‘ಅಂಗವಿಕಲ ಮಕ್ಕಳನ್ನು ಇತರೆ ಮಕ್ಕಳ ಜೊತೆ ಬೆರೆಯಲು ಬಿಡಬೇಕು. ಇದರಿಂದ ಶಿಕ್ಷಣ ಕಲಿಯಲು ಸಹಕಾರವಾಗಲಿದೆ’ ಎಂದರು.
ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಸಿ. ತಿಮ್ಮೇಶ್ ಮಾತನಾಡಿ, ‘ಅಂಗವಿಕಲತೆ ಶಾಪವಲ್ಲ. ಅಂಗವಿಕಲ ಮಕ್ಕಳಿಗೆ ಅನುಕಂಪಕ್ಕಿಂತ ಅವಕಾಶ ಕಲ್ಪಿಸಿದರೆ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಲಿದೆ’ ಎಂದರು.
ಶಿಕ್ಷಣ ಸಂಯೋಜಕರಾದ ರಂಗಪ್ಪ, ಸಂಗೀತ, ಸಿ.ಆರ್.ಪಿ ಅನಂತಪ್ಪ, ಬಿ.ಐ.ಇ.ಆರ್.ಟಿ. ಶಿಶುನಾಳಪ್ಪ, ತಿಮ್ಮೇಶ್, ರಾಜೇಶ್ವರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ನಯನ, ಅಲೋಕ್, ಮಮತ, ಆಶಾ, ಅನ್ನಮ್ಮ ಇದ್ದರು. 13 ಅಂಗವಿಕಲ ಮಕ್ಕಳಿಗೆ ಸಾಧನ–ಸಲಕರಣ ಕಿಟ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.