ನವಗ್ರಾಮ (ನರಸಿಂಹರಾಜಪುರ): ತಾಲ್ಲೂಕಿನ ಗುಬ್ಬಿಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವ ಗ್ರಾಮದಲ್ಲಿ ಸರೋಜ ಎಂಬ ಅಸಹಾಯಕ ಮಹಿಳೆಗೆ ದಾನಿಗಳು ಸೇರಿ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಸರೋಜ ಅವರಿಗೆ ದಾನಿಗಳು ಮನೆ ನಿರ್ಮಿಸಿಕೊಟ್ಟಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಸರೋಜ ಅವರು ಮನೆ ಇಲ್ಲದೆ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು. ಅವರಿಗೆ ಒಬ್ಬಳು ಚಿಕ್ಕ ಮಗಳಿದ್ದು ಶಾಲೆಗೆ ಹೋಗುತ್ತಿದ್ದಾಳೆ. ಕುಟುಂಬದಲ್ಲಿ ದುಡಿಯುವುವರು ಯಾರೂ ಇರಲಿಲ್ಲ. ಗ್ರಾಮ ಪಂಚಾಯಿತಿಯಿಂದ ಮನೆ ಕಟ್ಟಿಕೊಳ್ಳಲು ನಿವೇಶನ ನೀಡಲಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯರ ನೇತೃತ್ವದಲ್ಲಿ ದಾನಿಗಳಿಂದ ಅಂದಾಜು ₹4.25 ಲಕ್ಷ ಸಂಗ್ರಹಿಸಿ ಸುಸಜ್ಜಿತವಾದ ಮನೆ ನಿರ್ಮಿಸಿಕೊಟ್ಟಿದ್ದಾರೆ. ಸೋಮವಾರ ಮನೆಯ ಬೀಗದ ಕೀ ಯನ್ನು ಸರೋಜ ಅವರಿಗೆ ಹಸ್ತಾಂತರಿಸಲಾಯಿತು.
ಬೀಗ ಹಸ್ತಾಂತರಿಸುವ ವೇಳೆ ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಟಿ.ನಾಗರತ್ನ, ಉಪಾಧ್ಯಕ್ಷ ಡಿ.ಶಂಕರ್, ಸದಸ್ಯರಾದ ಕೆ.ವಿ.ಸಾಜು, ವಸಂತ, ಸತೀಶ್ ಗದ್ದೇಮನೆ, ಆದರ್ಶ, ಸಲೀಂ, ಧನಲಕ್ಷ್ಮಿ, ರಾಘವ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.