ಬಾಳೆಹೊನ್ನೂರು: ಹಿರೇಗದ್ದೆ ಗ್ರಾಮದ ತುಪ್ಪೂರು ಬಳಿ ಎರಡು ಕಾಡಾನೆಗಳು ಭತ್ತದ ಗದ್ದೆಗೆ ನುಗ್ಗಿ, ನಾಟಿ ಮಾಡಿದ ಭತ್ತ ಸಸಿಯನ್ನು ನಾಶಪಡಿಸಿವೆ.
ಶಾಲೆಯ ಹಿಂಭಾಗದಲ್ಲಿ ಬೀಡುಬಿಟ್ಟಿರುವ ಆನೆಗಳು, ರಾತ್ರಿ ವೇಳೆ ಅಕ್ಕಪಕ್ಕದ ತೋಟ–ಗದ್ದೆಗಳಿಗೆ ತೆರಳಿ ಬೆಳೆ ನಾಶ ಮಾಡುತ್ತಿವೆ. ಈ ಆನೆಗಳು ಕೊಪ್ಪ, ಶೃಂಗೇರಿ ತಾಲ್ಲೂಕಿನ ವಿವಿಧಡೆಗಳಲ್ಲಿ ಸಂಚರಿಸಿ ಮತ್ತೆ ವಾಪಸ್ ತುಪ್ಪೂರಿಗೆ ಬಂದಿವೆ.
ಆನೆಗಳು ನಿತ್ಯ ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ ಜನರು ಭಯಬೀತರಾಗಿದ್ದಾರೆ. ಅರಣ್ಯ ಇಲಾಖೆ ಆನೆಗಳನ್ನು ಓಡಿಸಲು ಮುಂದಾಗುತ್ತಿಲ್ಲ. ತಕ್ಷಣ ಅರಣ್ಯ ಇಲಾಖೆ ಆನೆಗಳನ್ನು ಹಿಡಿದು ಬೇರೆ ಕಡೆಗೆ ಸಾಗಿಸಬೇಕು ಎಂದು ಸ್ಥಳೀಯ ತುಪ್ಪೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.