ADVERTISEMENT

ಆನೆ ದಾಳಿ: ರೈತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 6:10 IST
Last Updated 8 ನವೆಂಬರ್ 2022, 6:10 IST
ಆನೆ ದಾಳಿ ನಿಯಂತ್ರಣಕ್ಕೆ ಒತ್ತಾಯಿಸಿ ರೈತರು ತರೀಕೆರೆ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಆನೆ ದಾಳಿ ನಿಯಂತ್ರಣಕ್ಕೆ ಒತ್ತಾಯಿಸಿ ರೈತರು ತರೀಕೆರೆ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.   

ತರೀಕೆರೆ: ತಾಲ್ಲೂಕಿನ ಸಿಡುಕನಹಳ್ಳಿ, ಗುಳ್ಳದಮನೆ,ಅತ್ತಿಗನಾಳು, ಚಿಕ್ಕತ್ತೂರು, ಜೋಡಿ ಗೋವಿಂದಪುರ ಭಾಗದಲ್ಲಿ ಆನೆಗಳ ಹಾವಳಿಯಿಂದ 25 ಎಕರೆ ಪ್ರದೇಶದಲ್ಲಿ ರೈತರು ಬೆಳೆದ ರಾಗಿ, ಭತ್ತ, ಜೋಳ, ಅಡಿಕೆ, ತೆಂಗಿನ ಬೆಳೆಗಳು ಹಾನಿಗೀಡಾಗಿವೆ. ಆನೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ಈ ಭಾಗದ ರೈತರು ಸೋಮವಾರ ತರೀಕೆರೆ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ರೈತ ಮುಖಂಡ ಕಿಟ್ಟಿಸ್ವಾಮಿ, ಆನೆ ದಾಳಿಯಿಂದ ರೈತರು ಬೆಳೆದ ಆಹಾರದ ಬೆಳೆಗಳಾದ ಭತ್ತ, ರಾಗಿ, ಜೋಳ, ಬೆಳೆ ಕೈಗೆ ಸಿಗದಂತದಾಗಿದೆ. ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆದರೆ ಆನೆ ದಾಳಿಯಿಂದ ತೋಟಗಳು ನಾಶವಾಗುತ್ತಿವೆ. ಅರಣ್ಯಾಧಿಕಾರಿ ಆನೆಗಳನ್ನು ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯಾಧಿಕಾರಿ ಸತೀಶ್ ಪೂಜಾರ್, ತರೀಕೆರೆ ಅರಣ್ಯ ವ್ಯಾಪ್ತಿಗೆ ಸುಮಾರು 30 ಕಿ.ಮೀ. ಆನೆ ನಿರೋಧಕ ಕಂದಕ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಂದ ನಂತರ ಕಂದಕ ನಿರ್ಮಾಣ ಮಾಡಲಾಗುವುದು ರೈತರು ಸಹಕರಿಸಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.