ಬಾಳೆಹೊನ್ನೂರು: ಪಟ್ಟಣದ ಕಾನ್ಕೆರೆ ಬಳಿಯ ಕಾಫಿ ತೋಟದಲ್ಲಿ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಜನ ಭಯಗೊಂಡಿದ್ದಾರೆ.
ವಾರದ ಹಿಂದೆ ಈ ಆನೆಗಳು ಬನ್ನೂರು ಗ್ರಾಮ ಪಂಚಾಯಿಯಿ ವ್ಯಾಪ್ತಿಯ ಕುಂಬ್ರಮನೆ ಸುತ್ತಮುತ್ತ ಕಾಣಿಸಿಕೊಂಡಿದ್ದವರು. ಅಲ್ಲಿನ ಗ್ರಾಮಸ್ಥರು ಓಡಿಸಿದ್ದರಿಂದ ಅವರು ಪಟ್ಟಣದ ಬಳಿಯ ನಿರ್ಮಲಾ ಕಾನ್ವೆಂಟ್, ಹಲಸೂರು ಬಳಿ ಕಾಣಿಸಿಕೊಂಡಿವೆ. ಇಲಾಖೆ ಸಿಬ್ಬಂದಿ ಮೂರು ದಿನಗಳಿಂದ ಪ್ರಯತ್ನ ಪಟ್ಟರೂ ಅವು ತೆರಳುತ್ತಿಲ್ಲ.
ಎಸಿಎಫ್ ಮೋಹನ್ ಕುಮಾರ್ ಮಾರ್ಗದರ್ಶನದಲ್ಲಿ ಪ್ರೊಬೇಷನರಿ ಅಧಿಕಾರಿ ನೇಹಾ ಅವರ ನೇತೃತ್ವದಲ್ಲಿ ‘ಇಟಿಎಸ್’ ಸಿಬ್ಬಂದಿ, ಇಲಾಖೆ ಸಿಬ್ಬಂದಿ ಹಲಸೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಸಂಜೆ ವೇಳೆ ಜಮೀನಿಗೆ ದಾಳಿ ಮಾಡಿ ಬೆಳೆ ನಾಶ ಮಾಡುತ್ತಿವೆ. ಆನೆಗಳು ಇರುವುದರಿಂದ ಕಾರ್ಮಿಕರು ತೋಟಕ್ಕೆ ಕಾರ್ಮಿಕರು ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಸಂಜೆ ಏಳು ಗಂಟೆ ಬಳಿಕ ಪಟ್ಟಣ, ಹಲಸೂರು, ಕಾನ್ಕೆರೆ, ಅಯ್ಯಪ್ಪಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನವರು ಮನೆಯಿಂದ ಹೊರಬರದಂತೆ ಅರಣ್ಯ ಇಲಾಖೆ ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.