ನರಸಿಂಹರಾಜಪುರ: ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಕ್ಷೀಣಿಸಿದ್ದರೂ ಹಲವು ಕಡೆ ಹಾನಿ ಮುಂದುವರಿದಿದೆ. ಕುದುರೆಗುಂಡಿ, ಕಟ್ಟಿನಮನೆ ಮಾರ್ಗದ ಮೂಲಕ ಚಿಕ್ಕಗ್ರಹಾರಕ್ಕೆ ಹೋಗುವ ಪ್ರಮುಖ ರಸ್ತೆಯ ಪಕ್ಕ ಕಟ್ಟಿನಮನೆ ಗ್ರಾಮದ ವ್ಯಾಪ್ತಿಯಲ್ಲಿ ಧರೆ ಕುಸಿದಿದಿದೆ. ಇದರಿಂದ ರಸ್ತೆ ಕುಸಿಯುವ ಭೀತಿ ಉಂಟಾಗಿದೆ.
ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈರಾಪುರ ಗ್ರಾಮದ ಕೊಲ್ಲಪ್ಪ ಎಂಬುವರ ಜಮೀನಿಗೆ ಹಳ್ಳದ ನೀರು ನುಗ್ಗಿ ಹಾನಿಯಾಗಿದೆ. ಇದೇ ಗ್ರಾಮದ ವ್ಯಾಪ್ತಿಯಲ್ಲಿ ಮೋರಿ ಮತ್ತು ರಸ್ತೆಗೆ ಹಾನಿಯಾಗಿದೆ. ಪಟ್ಟಣದ ವಾರ್ಡ್ ನಂ.5ರ ನಿವಾಸಿ ರಹಮತ್ತುಲ್ಲಾ ಅವರ ಮನೆಯ ಗೋಡೆ ಕುಸಿದಿದೆ. ವಾರ್ಡ್ ನಂ.4ರ ಎಂ.ಕೆ.ದಯಾನಂದ್ ಅವರ ಮನೆಯ ಗೋಡೆ ಕುಸಿದಿದೆ. ವಾರ್ಡ್ ನಂ.3ರ ಪೌರ ಕಾರ್ಮಿಕ ಕಾಲೋನಿಯ ನಿವಾಸಿ ಕೃಷ್ಣ ಅವರ ವಾಸದ ಮನೆಯ ಹಿಂದೆ ಇರುವ ಕಟ್ಟಡದಲ್ಲಿ ಕುರಿಗಳನ್ನು ಕಟ್ಟಿಹಾಕಿದ್ದು ಮಳೆಯಿಂದ ಗೋಡೆ ಕುಸಿದು ಒಂದು ಕುರಿ ಮೃತಪಟ್ಟಿದೆ. ಗುರುವಾರ ಬೆಳಿಗ್ಗೆ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣವಿತ್ತು. ಆದರೆ, ಸಂಜೆ 5ರಿಂದ ಒಂದು ಗಂಟೆ ಧಾರಕಾರ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.