ADVERTISEMENT

ಹುಸಿ ಕರೆಗಳಿಗೆ ಪ್ರಾಮುಖ್ಯ ಕೊಡಬೇಡಿ: ನಾಗೇಶ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 20:58 IST
Last Updated 8 ಏಪ್ರಿಲ್ 2022, 20:58 IST

ಚಿಕ್ಕಮಗಳೂರು: ‘ಹುಸಿ ಕರೆಗಳಿಗೆ ಪ್ರಾಮುಖ್ಯ ಕೊಡಬೇಡಿ, ವಿದ್ಯಾರ್ಥಿಗಳು ಗಾಬರಿಯಾಗುತ್ತಾರೆ. ಯಾರೋ ಒಬ್ಬ ಫೋನ್‌ನಲ್ಲಿ ಈ ಕೆಲಸ ಮಾಡಿದ್ದಾನೆ, ಗೃಹ ಇಲಾಖೆ ಮಾಹಿತಿ ಕಲೆ ಹಾಕುತ್ತಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದರು.

ಶಾಲೆಗಳಿಗೆ ಬಾಂಬ್ ಬೆದರಿಕೆಯ ‘ಇ–ಮೇಲ್‌’ ಬಂದ ಸುದ್ದಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರ ‘ಇ–ಮೇಲ್‌’ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ತಂಡಗಳು ಪರಿಶೀಲನೆಯಲ್ಲಿ ತೊಡಗಿವೆ’ ಎಂದು ಉತ್ತರಿಸಿದರು.

‘ತಾನು ಪರೀಕ್ಷೆ ತಯಾರಾಗಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಮುಂದೂಡಿಸಲು ಒಬ್ಬ ಹಿಂದೊಮ್ಮೆ ಇದೇ ರೀತಿ ಮಾಡಿದ್ದ. ತನಿಖೆಯಲ್ಲಿ ಅದು ಗೊತ್ತಾಗಿತ್ತು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.