ADVERTISEMENT

ಕೊಪ್ಪ | ಅಕ್ರಮವಾಗಿ ಹೋರಿ ಕಟ್ಟಿಹಾಕಿದ ಪ್ರಕರಣ: ಎಫ್ಐಆರ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:53 IST
Last Updated 5 ಜೂನ್ 2025, 13:53 IST
FIR.
FIR.   

ಕೊಪ್ಪ: ತೋಟದಲ್ಲಿ ಗೋವುಗಳನ್ನು ಅಕ್ರಮವಾಗಿ ಕಟ್ಟಿಹಾಕಿದ ಆರೋಪದಲ್ಲಿ ಕಾಳನಾಯಕನಟ್ಟೆ ನಿವಾಸಿಗಳಾದ ನೂರುಲ್ಲಾ ಖಾನ್, ಮನ್ಸೂರ್ ಅಲಿ ವಿರುದ್ಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ನಿಲುವಾಗಿಲು ನಿವಾಸಿ, ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ಶೆಟ್ಟಿ ಎಂಬುವರಿಗೆ ಸೇರಿದ ಮಲೆನಾಡು ಗಿಡ್ಡ ತಳಿಯ ಎರಡು ಹೋರಿಗಳನ್ನು ಮನ್ಸೂರ್ ಅಲಿ ಅವರ ತೋಟದಲ್ಲಿ ಹಿಂಸಾತ್ಮಕ ರೂಪದಲ್ಲಿ ಕಟ್ಟಿಹಾಕಿರುವುದು ಪತ್ತೆಯಾಗಿದೆ ಎಂದು ದೂರು ದಾಖಲಾಗಿದೆ.

ಮನ್ಸೂರ್ ಅಲಿ ಅವರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ನೂರುಲ್ಲಾ ಖಾನ್ ವಿರುದ್ಧ ಈ ಹಿಂದೆಯೂ ಇಂಥ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.