
ಪ್ರಜಾವಾಣಿ ವಾರ್ತೆ
ಬಾಳೆಹೊನ್ನೂರು: ವಿವಿಧ ಎರಡು ಪ್ರಕರಣಗಳಲ್ಲಿ 66 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆ ಗುರುವಾರ ತೆರವುಗೊಳಿಸಿದೆ.
ಕಳಸ ತಾಲ್ಲೂಕು ತನೂಡಿ ಗ್ರಾಮದ ಸರ್ವೆ ನಂಬರ್ 36ರ ಹಲಸೂರು ಮೀಸಲು ಅರಣ್ಯ ಪ್ರದೇಶದಲ್ಲಿ 60 ಎಕರೆಯನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದರು. ಅದನ್ನು ಗುರುವಾರ ತೆರವು ಮಾಡಿ ಸುತ್ತಲೂ ಕಂದಕ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದೆಡೆ ಬಾಳೆಹೊನ್ನೂರು ಹೋಬಳಿಯ ಬಿ.ಕಣಬೂರು ಗ್ರಾಮದ ಸರ್ವೆ ನಂಬರ್ 177ರ ಮಧುಗುಣಿ ಕಿರು ಅರಣ್ಯ ಪ್ರದೇಶದಲ್ಲಿ 6 ಎಕರೆ ಒತ್ತುವರಿ ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.