ADVERTISEMENT

ಸಂಸೆ, ಕುದುರೆಮುಖದಲ್ಲಿ ಭಾರಿ ಮಳೆ

ನರಸಿಂಹರಾಜಪುರದ ಕುಸುಬೂರಿನಲ್ಲಿ ಮನೆಯೊಂದಕ್ಕೆ ನುಗ್ಗಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:12 IST
Last Updated 7 ಅಕ್ಟೋಬರ್ 2022, 6:12 IST
ಕಳಸ ಸಮೀಪದ ಕಾರಗದ್ದೆ ಬಳಿ ಮಳೆ ನೀರು ಸೇತುವೆ ಮೇಲೆ ತುಂಬಿ ಸಂಚಾರಕ್ಕೆ ಅಡಚಣೆ ಆಗಿರುವುದು.
ಕಳಸ ಸಮೀಪದ ಕಾರಗದ್ದೆ ಬಳಿ ಮಳೆ ನೀರು ಸೇತುವೆ ಮೇಲೆ ತುಂಬಿ ಸಂಚಾರಕ್ಕೆ ಅಡಚಣೆ ಆಗಿರುವುದು.   

ಕಳಸ: ಸಂಸೆ, ಕುದುರೆಮುಖ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದೆ.

ಬೆಳಿಗ್ಗೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 7 ಗಂಟೆವರೆಗೂ ಸುರಿದಿದೆ. ಇದರಿಂದ ಭದ್ರಾ ನದಿಯಲ್ಲಿ ಕೆಂಬಣ್ಣದ ನೀರು ತುಂಬಿ ಹರಿಯುತ್ತಿದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆ ಜನರಿಗೆ ಅಚ್ಚರಿ ಮೂಡಿಸಿದೆ. ವಿಜಯದಶಮಿ ದಿನ ಅಡಿಕೆ ಗೊನೆ ಮುಹೂರ್ತ ಮಾಡಿರುವ ಕೃಷಿಕರು ಸದ್ಯದಲ್ಲೇ ಅಡಿಕೆ ಕೊಯ್ಲು ಆರಂಭಿಸುವ ಯೋಚನೆ ಹೊಂದಿದ್ದಾರೆ.

ಆದರೆ ಅಕಾಲಿಕ ಮಳೆಯು ಅಡಿಕೆ ಸಂಸ್ಕರಣೆಯನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಜೊತೆಗೆ ಅಡಿಕೆ ಎಲೆ ಚುಕ್ಕಿ ರೋಗ ಹರಡುವ ಆತಂಕ ಮೂಡಿದೆ.

ADVERTISEMENT

ಮನೆಗೆ ನುಗ್ಗಿದ ನೀರು
ನರಸಿಂಹರಾಜಪುರ:
ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಹಲವು ಗ್ರಾಮಗಳಲ್ಲಿ ಮನೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಸುಬೂರು ಕಾಲೊನಿಯ ಮಂಜುಳಾ ಎಂಬುವರ ಮನೆಗೆ ಕಾಡಿನಿಂದ ಹರಿದು ಬಂದು ನೀರು ಭಾರಿ ಪ್ರಮಾಣದಲ್ಲಿ ನುಗ್ಗಿ ಹಾನಿಯಾಗಿದೆ.

ಹೊಸಕೊಪ್ಪದ ಮನೋಜ್ ಎಂಬುವರ ಗದ್ದೆ ಮೇಲಿರುವ ಕೋಡಿ ಚಾನೆಲ್‌ನ ದಂಡೆ ಒಡೆದು ತೋಟಕ್ಕೆ ನೀರು ನುಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.